ಪಾ.ವೆಂ.ಪುಸ್ತಕದ ಕುರಿತು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ

Update: 2020-07-12 15:34 GMT

ಉಡುಪಿ, ಜು.12: ಉಡುಪಿಯ ಸಾಂಸ್ಕೃತಿಕ ಸಂಘಟನೆ ‘ರಥಬೀದಿ ಗೆಳೆಯರು’ ವತಿಯಿಂದ ದೇಶದ ಎಲ್ಲಾ ವಿಶ್ವವಿದ್ಯಾಲಯಗಳ ಪದವಿ ಮತ್ತು ಸ್ನಾತಕೋತ್ತರ ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗಾಗಿ ‘ನಾನು ಮೆಚ್ಚಿದ ಪಾ. ವೆಂ.ಪುಸ್ತಕ’ ವಿಷಯದ ಕುರಿತು ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಕನ್ನಡದ ಖ್ಯಾತ ಸಾಹಿತಿ, ಲೇಖಕ, ವಿದ್ವಾಂಸ, ಹಾಸ್ಯಬರಹಗಾರರಾಗಿದ್ದ ಪತ್ರಕರ್ತಪಾ.ವೆಂ.ಆಚಾರ್ಯರ ಎಲ್ಲಾ ಪುಸ್ತಕಗಳು - (pavem.sirinudi.com) ಎಂಬ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಅವರ ಹಾಸ್ಯ, ವೈಚಾರಿಕ, ಪದಚರಿತೆ ಯಾವುದೇ ವಿಭಾಗದ ಒಂದು ಪುಸ್ತಕದ ಬಗ್ಗೆ ಲೇಖ-ವಿಮರ್ಶೆ ಬರೆದು ಕಳುಹಿಸಬಹುದು. ಪುಟಮಿತಿ ಪುಲ್‌ಸೈಜ್ ಹಾಳೆಯಲ್ಲಿ 5ರಿಂದ 8 ಪುಟಗಳು.

 ಪ್ರಬಂಧವನ್ನು ಡಿಟಿಪಿ ಮಾಡಿಸಿ ಕಡ್ಡಾಯವಾಗಿ ಅಂಚೆ ಮೂಲಕ ಕಳುಹಿಸಬೇಕು. ಪ್ರಬಂಧ ತಲುಪಲು ಆಗಸ್ಟ್ 31 ಕೊನೆಯ ದಿನವಾಗಿರುತ್ತದೆ. ಪ್ರಬಂಧದ ಜೊತೆಗೆ ವಿದ್ಯಾರ್ಥಿಯ ಕಾಲೇಜು ಐಡಿ ಕಾರ್ಡ್‌ನ ಜೆರಾಕ್ಸ್ ಪ್ರತಿಯನ್ನು ಕಳುಹಿಸಬೇಕು.

ವಿಜೇತರಿಗೆ ಪ್ರಥಮ ಬಹುಮಾನ 2000ರೂ. ಹಾಗೂ ದ್ವಿತೀಯ ಬಹುಮಾನ 1,000ರೂ. ಆಗಿದೆ. ಪ್ರಬಂಧ ಕಳುಹಿಸುವ ವಿಳಾಸ: ಪ್ರೊ. ಮುರಳೀಧರ ಉಪಾದ್ಯ, ‘ಸಖೀಗೀತ’, ಎಂಐಜಿ-1, ಹುಡ್ಕೋ 1ಮೈನ್, ದೊಡ್ಡಣಗುಡ್ಡೆ, ಉಡುಪಿ-576102 (ಮೊಬೈಲ್:9448215779).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News