ದ್ವಿತೀಯ ಪಿಯು ಸಾಧಕಿಯರು

Update: 2020-07-16 12:54 GMT
ಆಮಿನ ಸೋಹ ಬಾನು, ಮರಿಯಮ್ಮ ಸಿಮ್ರಾನ್

ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಬಜ್ಪೆಸಂತ ಜೋಸೆಫ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಆಮಿನ ಸೋಹ ಬಾನು 542 (ಶೇ.90.3)ಅಂಕಗಳನ್ನು ಗಳಿಸಿ ವಿಶೇಷ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಬಜ್ಪೆ ಕರಂಬಾರಿನ ಹೈದರ್ ಅಲಿ ಮತ್ತು ಫರೀದ ಬಾನು ದಂಪತಿಯ ಪುತ್ರಿ.

ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಮುಲ್ಕಿಯ ಶ್ರೀ ನಾರಾಯಣಗುರು ಪಿಯು ಕಾಲೇಜಿನ ವಿದ್ಯಾರ್ಥಿನಿ ಮರಿಯಮ್ಮ ಸಿಮ್ರಾನ್ 583 ಅಂಕಗಳನ್ನು ಗಳಿಸಿ ವಿಶೇಷ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕನ್ನಡದಲ್ಲಿ 96, ಇಂಗ್ಲಿಷ್‌ನಲ್ಲಿ 91, ಇಕೊನಾಮಿಕ್ಸ್‌ನಲ್ಲಿ 100, ಬಿಸಿನೆಸ್ ಸ್ಟಡೀಸ್‌ನಲ್ಲಿ 100, ಅಕೌಂಟೆನ್ಸಿಯಲ್ಲಿ 99, ಕಂಪ್ಯೂಟರ್ ಸೈನ್ಸ್‌ನಲ್ಲಿ 97 ಅಂಕದೊಂದಿಗೆ ಶೇ.97.17 ಫಲಿತಾಂಶ ದಾಖಲಿಸಿರುವ ಈಕೆ ಹೆಜಮಾಡಿ ಕೋಡಿಯ ಸೈಯದಾಲಿ-ರಮ್ಲತ್ ಎಂಸಿ ದಂಪತಿಯ ಪುತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News