ನೇಣು ಬಿಗಿದು 10 ವರ್ಷದ ಬಾಲಕಿ ಆತ್ಮಹತ್ಯೆ

Update: 2020-07-17 10:13 GMT
ಸಾಂದರ್ಭಿಕ ಚಿತ್ರ

ಉಪ್ಪಿನಂಗಡಿ, ಜು.17: ತಾಯಿ ಬೈದರೆಂದು ಬೇಸತ್ತ ಬಾಲಕಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಿರೇಬಂಡಾಡಿ ಗ್ರಾಮದಲ್ಲಿ ನಡೆದಿದೆ.

ಇಲ್ಲಿನ ಕೇದಗೆದಡಿಯ ಜಯಚಂದ್ರ ಎಂಬವರ ಪುತ್ರಿ ಪ್ರಿಯಾ(10) ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ಗುರುವಾರ ಸಂಜೆ ಈ ಘಟನೆ ನಡೆದಿದ್ದು, ತನ್ನ ತಲೆಗೂದಲು ಕಟ್ಟಲು ಹೇಳಿದ್ದಕ್ಕೆ ಪ್ರಿಯಾಳಿಗೆ ತಾಯಿ ಬೈದರೆನ್ನಲಾಗಿದೆ. ಇದೇ ಕಾರಣಕ್ಕೆ ಪ್ರಿಯಾ ಕೋಪ ಮಾಡಿಕೊಂಡು ತೆರಳಿದ್ದಳೆನ್ನಲಾಗಿದೆ. ಹೀಗೆ ಹೋದಾಕೆ ಕಾಣದಿದ್ದಾಗ ಮನೆ ಮಂದಿ ಹುಡುಕಾಡಿದಾಗ ಮನೆಯ ಶೌಚಾಲಯದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂತು. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News