ರಂಗಕಲಾವಿದ ವಿಠಲ ಆಚಾರ್ಯ ನಿಧನ

Update: 2020-07-17 12:29 GMT

ಮಣಿಪಾಲ, ಜು.17: ಇಲ್ಲಿನ ಸರಳೇಬೆಟ್ಟು ಗಣೇಶ್ ಭಾಗ್ ನಿವಾಸಿ, ನಾಟಕ ಕಲಾವಿದ ವಿಠ್ಠಲ್ ಆಚಾರ್ಯ (66) ಅಸೌಖ್ಯದಿಂದ ಉಡುಪಿಯ ಖಾಸಗಿ ಆಸ್ಪ್ರೆಯಲ್ಲಿ ಗುರುವಾರ ನಿಧನರಾದರು.

 ವಿಠಲ ಆರ್ಚಾಯರು ಎಂಬತ್ತರ ದಶಕದಲ್ಲಿ ನಾಟಕ ಕಲಾವಿದರಾಗಿ ತುಳು ರಂಗಭೂಮಿಯನ್ನು ಬೆಳಗಿಸಿದವರಲ್ಲಿ ಒಬ್ಬರು. ವಿಭಿನ್ನ ಶೈಲಿಯ ಮಾತುಗಾರಿಕೆ ಹಾಗೂ ಅಭಿನಯದ ಮೂಲಕ ಪ್ರಧಾನ ಸ್ತ್ರೀಪಾತ್ರದಲ್ಲಿ, ತುಳುನಾಟಕದ ಅಾರ ಕಲಾಭಿಮಾನಿಗಳು ರಂಜಿಸಿದ್ಧರು.

 ಮಂಗಳೂರಿನ ಸಂಜೀವ ಡಂಡೆಕೇರಿ ಹಾಗೂ ಪರ್ಕಳದ ಕೆ.ಕೆ.ಸಾಲಿಯಾನ್ ವಿರಚಿತ ಹಾಗೂ ಪತ್ರಕರ್ತ ಸುಧಾಕರ ಬನ್ನಂಜೆ ಅವರ ನಿರ್ದೇಶನದಲ್ಲಿ ತುಳು ನಾಟಕಗಳಾದ ಬಯ್ಯ ಮಲ್ಲಿಗೆ, ಪೋರ್ತು ಕಂತನಗ, ಬಂಗಾರ್ದ ಬಿಸತ್ತಿ, ಮಾಜಂದೀ ಕುಂಕುಮ, ಸರ್ಪ ಸಂಕಲೆ,ಕಾಸ್‌ಗಾದೆ ಕಂಡನೆ, ಮಸಣದ ಮದ್ಮಾಲ್,ದಾರೆದ ಸೀರೆ, ವಸುಂದರಾ, ನೆರೇಲ್ ದಾಂತಿ ಮರ, ಕನ್ನಡ ನಾಟಕ ಗಳಾದ ಪ್ರಕೃತಿಯಲ್ಲಿ ಪ್ರಮುಖ ನಾಯಕಿ ಪಾತ್ರದಲ್ಲಿ ನಟಿಸಿದ್ದರು. ಮೃತರು ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ತುಳು ನಾಟಕ ಕಲಾಭಿಮಾನಿಗಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News