ಪಡುಬಿದ್ರಿ ಬೀಚ್: ಕಾಂಕ್ರೀಟ್ ತಡೆಗೋಡೆ ಸಮುದ್ರಪಾಲು

Update: 2020-07-18 12:14 GMT

ಪಡುಬಿದ್ರಿ: ಕಳೆದ ಎರಡು ದಿನಗಳಿಂದ ಕಾಣಿಸಿಕೊಂಡಿದ್ದ ಕಡಲ್ಕೊರೆತ ಶನಿವಾರ ತೀವ್ರಗೊಂಡಿದ್ದು, ಪಡುಬಿದ್ರಿ ಬೀಚ್‍ನಲ್ಲಿ ಕಾಂಕ್ರೀಟ್ ತಡೆಗೋಡೆ ಸಮುದ್ರ ಪಾಲಾಗಿದೆ.

ಕಡಲ ಅಬ್ಬರ ಹೆಚ್ಚಾಗಿದ್ದು, ಭಾರೀ ಗಾತ್ರದ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿದೆ. ಸಮುದ್ರದ ಅಬ್ಬರಕ್ಕೆ  ಪ್ರವಾಸೋಧ್ಯಮ ಇಲಾಖೆ ರಚಿಸಿದ ಕಾಂಕ್ರೀಟ್ ತಡೆಗೋಡೆ ಸಮುದ್ರ ಪಾಲಾಗಿದೆ. ಶನಿವಾರ ಭಾಗಶಃ ಹಾನಿಯಾಗಿತ್ತು. 

ಇನ್ನೊಂದು ಭಾಗದಲ್ಲಿ ಅಳವಡಿಸಿದ ಇಂಟರ್‍ಲಾಕ್‍ಗೆ ಭಾಗಶಃ ಹಾನಿಯಾಗಿದೆ. ಈ ಭಾಗದಲ್ಲಿ ಹಲವು ತೆಂಗಿನ ಮರಗಳಿದ್ದು, ಸಮುದ್ರ ಕೊರೆತ ಇನ್ನೂ ಹೆಚ್ಚಾದಲ್ಲಿ ಕಡಲ ಒಡಲು ಸೇರಲಿದೆ. 

ತೆಂಕ ಎರ್ಮಾಳು ಸಮುದ್ರದಲ್ಲಿ ಯುಪಿಸಿಎಲ್ ಕಂಪೆನಿ ಅಳವಡಿಸಿದ ಪೈಪ್‍ಲೈನ್ ಸಮೀಪದಲ್ಲಿ ಕಡಲ್ಕೊರೆತ ಕಾಣಿಸಿಕೊಂಡಿದ್ದು, ಇಲ್ಲೂ ರಸ್ತೆ ಅಪಾಯದಲ್ಲಿದೆ. ಪಡುಬಿದ್ರಿಯ ಕಾಡಿಪಟ್ಣದಲ್ಲೂ ಕಡಲ್ಕೊರೆತ ಕಾಣಿಸಿಕೊಂಡಿದ್ದು, ಈ ಭಾಗದಲ್ಲಿ ತೆಂಗಿನ ಮರಗಳು ಸಮುದ್ರ ಪಾಲಾಗುವ ಸಾಧ್ಯತೆ ಇದ್ದು, ಮೀನುಗಾರಿಕಾ ರಸ್ತೆಯ ಸನಿಹದಲ್ಲಿದೆ. ಈ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News