ಅಂಗವೈಕಲ್ಯತೆ ಮೆಟ್ಟಿನಿಂತ ರಕ್ಷಾ ನಾಯಕ್‌ಗೆ ಸನ್ಮಾನ

Update: 2020-07-18 13:19 GMT

ಉಡುಪಿ, ಜು.18: ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ಶೇ.93 ಅಂಕ ಗಳಿಸಿದ ಹಿರಿಯಡ್ಕ ಬೊಮ್ಮಾರಬೆಟ್ಟು ಗ್ರಾಮದ ವಿಕಲಚೇನತ ವಿದ್ಯಾರ್ಥಿನಿ ರಕ್ಷಾ ನಾಯಕ್‌ರನ್ನು ಅವರ ನಿವಾಸದಲ್ಲಿ ಸನ್ಮಾನಿಸಲಾಯಿತು.

ಬಾಲ್ಯದಿಂದಲೇ ಬಲಗೈ ಮತ್ತು ಬಲಗಾಲಿನ ಸ್ವಾಧೀನವಿಲ್ಲದೆ ಎಡಗೈಯಲ್ಲಿ ಪರೀಕ್ಷೆ ಬರೆದು, ಅಂಗವೈಕಲ್ಯತೆಯನ್ನು ಮೆಟ್ಟಿನಿಂತು ಸಾಧನೆ ಮಾಡಿರುವ ರಕ್ಷಾ ನಾಯಕ್ ಅವರನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶ್ಪಾಲ್ ಸುವರ್ಣ 25,000 ಪ್ರೋತ್ಸಾಹ ಧನ ನೀಡಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ತಾಪಂ ಸದಸ್ಯೆ ಸಂಧ್ಯಾ ಕಾಮತ್, ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಅಕ್ಷಿತ್ ಶೆಟ್ಟಿ ಹೆರ್ಗ, ಹಿಂದೂ ಯುವ ಸೇನೆಯ ಜಿಲ್ಲಾ ಉಪಾಧ್ಯಕ್ಷ ಶೇಖರ ಶೆಟ್ಟಿ, ಸಾಮಾಜಿಕ ಕಾರ್ಯಕರ್ತೆ ನೀತಾ ಪ್ರಭು, ಪ್ರಶಾಂತ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News