ಕೋವಿಡ್-19 ಮೃತದೇಹಗಳ ದಫನಕ್ಕೆ ಸಹಕಾರ: ವಕ್ಫ್ ಮಂಡಳಿ

Update: 2020-07-18 13:25 GMT

ಉಡುಪಿ, ಜು.18: ಜಿಲ್ಲೆಯಲ್ಲಿ ಕೋವಿಡ್-19 ರೋಗದಿಂದ ಮೃತಪಟ್ಟ ಮುಸ್ಲಿಂ ಮೃತದೇಹಗಳ ದಫನ(ತದ್‌ಫೀನ್)ವನ್ನು ವಕ್ಫ್ ಮಂಡಳಿಯಿಂದ ಸೂಚಿಸಿದ ಮಾರ್ಗಸೂಚಿಗಳನ್ವಯ ಗೌರವಯುತವಾಗಿ ಮಾಡಲು ಆಡಳಿತ ಸಮಿತಿಗಳು ಸಹಕರಿಸಬೇಕು ಎಂದು ಉಡುಪಿ ಜಿಲ್ಲಾ ವಕ್ಫ್ ಅಧಿಕಾರಿ ತಿಳಿಸಿದ್ದಾರೆ.

ಜಿಲ್ಲೆಯ ಎಲ್ಲ ವಕ್ಫ್ ಸಂಸ್ಥೆಗಳ ಅಧೀನದಲ್ಲಿರುವ ನೋಂದಾಯಿತ ಅಥವಾ ನೋಂದಾಯಿಸದೇ ಇರುವ ಎಲ್ಲಾ ಖಬರಸ್ತಾನಗಳ ಆಡಳಿತ ಸಮಿತಿಗಳು ರಾಜ್ಯ ವಕ್ಫ್ ಮಂಡಳಿಯಿಂದ ಸೂಚಿಸಿದ ಮಾರ್ಗಸೂಚಿಗಳನ್ವಯ ಗೊತ್ತು ಪಡಿಸಿದ ನೋಡಲ್ ಅಧಿಕಾರಿಗಳೊಂದಿಗೆ ಸಹಕರಿಸಿ ಕೋವಿಡ್-19 ರೋಗದಿಂದ ಮರಣ ಹೊಂದುವ ಮುಸ್ಲಿಂ ಮೃತರ ಅಂತ್ಯಸಂಸ್ಕಾರವನ್ನು ಗೌರವಯುತವಾಗಿ ದಫನ ಮಾಡಲು ಸಹಕರಿಸಬೇಕು.

ಆಡಳಿತ ಸಮಿತಿಗಳು ಈ ಕಾರ್ಯದಲ್ಲಿ ಸಹಕರಿಸಲು ನಿರಾಕರಿಸಿದಲ್ಲಿ ಮೃತರಿಗೆ ಮಾಡಿದ ಅಪಮಾನವೆಂದು ಪರಿಗಣಿಸಿ, ಅಂತಹ ಸಂಸ್ಥೆಗಳ ಆಡಳಿತ ಸಮಿತಿಗಳ ಅಧ್ಯಕ್ಷರು/ಕಾರ್ಯದರ್ಶಿಗಳು/ಮುತವಲ್ಲಿ/ಆಡಳಿತಾಧಿ ಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದಲ್ಲದೆ ವಕ್ಫ್ ಕಾಯಿದೆ 1995ರ ಪ್ರಕಾರ ಹಾಗೂ ಭಾರತೀಯ ದಂಡ ಸಂಹಿತೆಯಂತೆ ಕ್ರಮ ಜರುಗಿಸಲಾಗುವುದೆಂದು ವಕ್ಫ್ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News