ಕೊರೋನ ಗೆದ್ದು ಬಂದ ಕೋಟದ ಕುಟುಂಬ: 4 ತಿಂಗಳ ಮಗು, ವೃದ್ಧೆ ಸಹಿತ ಏಳು ಮಂದಿ ಗುಣಮುಖ

Update: 2020-07-18 16:06 GMT

ಕೋಟ, ಜು.18: ಕೊರೋನ ಸೋಂಕಿನಿಂದ ಕೋವಿಡ್-19 ಆಸ್ಪತ್ರೆಗೆ ದಾಖಲಾಗಿದ್ದ ಕೋಟದ ನಾಲ್ಕು ತಿಂಗಳ ಮಗು, 85ರ ವೃದ್ಧೆ ಸಹಿತ ಒಂದೇ ಕುಟುಂಬದ ಏಳು ಮಂದಿ ಗುಣಮುಖರಾಗಿ ಮನೆ ಸೇರಿದ್ದಾರೆ.

ಜು.7ರಂದು ಕೊರೋನ ಪರೀಕ್ಷೆಗೆ ಒಳಪಟ್ಟ ಕೋಟದ ಅಂಗಡಿ ಮಾಲಕ ಸಹಿತ ಅವರ ಮನೆಯ 7 ಮತ್ತು ನಾಲ್ಕು ಮಂದಿಗೆ ಕೆಲಸದವರಿಗೆ ಪಾಸಿಟಿವ್ ಬಂದಿತ್ತು. ಬಳಿಕ ಕೋವಿಡ್ ಆಸ್ಪತ್ರೆಯಲ್ಲಿ 10 ದಿನಗಳ ಚಿಕಿತ್ಸೆ ಪಡೆದ ಇವರು ಇದೀಗ ಕೊರೋನವನ್ನು ಗೆದ್ದು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಈ ಕುರಿತು ಇಡೀ ಕುಟುಂಬದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

‘85 ವರ್ಷದ ನನ್ನ ತಾಯಿ, 56 ವರ್ಷದ ನನ್ನ ಪತ್ನಿ, ನಾಲ್ಕು ತಿಂಗಳ ಮೊಮ್ಮಗಳು ಸೇರಿದಂತೆ ಒಟ್ಟು ಏಳು ಮಂದಿ ಕೊರೋನವನ್ನು ಗೆದ್ದು ಆರೋಗ್ಯವಾಗಿ ಮನೆಗೆ ಬಂದಿದ್ದೇವೆ. ಕೊರೋನ ಅಂದರೆ ಇಲಿ ಇದ್ದಂತೆ, ಕೆಲವರು ಅದನ್ನು ಹುಲಿಯಂತೆ ಬಿಂಬಿಸುತ್ತಿದ್ದಾರೆ. ಕೊರೋನ ಬಗ್ಗೆ ಯಾರು ಕೂಡ ಹೆದರಬೇಕಾಗಿಲ್ಲ. ಧೈರ್ಯದಿಂದ ಇರಬೇಕು. ಧೈರ್ಯವೇ ಅದಕ್ಕೆ ಮದ್ದು’ ಎಂದು ಅಂಗಡಿ ಮಾಲಕ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News