ಅನ್ವರ್ ಪಾಷಾ ಕೊಲೆ ಪ್ರಕರಣ: ಮಂಪರು ಪರೀಕ್ಷೆಗೂ ಒಳಪಡುವೆ; ರಿಝ್ವಾನ್ ನವಾಬ್

Update: 2020-07-19 18:53 GMT

ಬೆಂಗಳೂರು, ಜು.19: ಅನ್ವರ್ ಪಾಷಾ ಕೊಲೆ ಪ್ರಕರಣ ಸಂಬಂಧ ಯಾವುದೇ ತನಿಖೆ ನಡೆದರು ಸಹಕಾರ ನೀಡಲಾಗುವುದು. ಇನ್ನು, ಮಂಪರು ಪರೀಕ್ಷೆಗೂ ಒಳಪಡುವೆ ಎಂದು ಬಿಬಿಎಂಪಿ ಗುರಪ್ಪನಪಾಳ್ಯ ವಾರ್ಡಿನ ಕಾಂಗ್ರೆಸ್ ಸದಸ್ಯ ಮುಹಮ್ಮದ್ ರಿಝ್ವಾನ್ ನವಾಬ್ ತಿಳಿಸಿದರು.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನ್ವರ್ ಪಾಷಾ ಕೊಲೆ ಪ್ರಕರಣದಲ್ಲಿ ನನ್ನ ಹಾಗೂ ಕುಟುಂಬ ಸದಸ್ಯರ ಪಾತ್ರವಿಲ್ಲ. ಆದರೂ, ಉದ್ದೇಶ ಪೂರಕವಾಗಿ ಆರೋಪಗಳನ್ನು ಮಾಡಲಾಗುತ್ತಿದೆ. ಅಲ್ಲದೆ, ಈ ಬಗ್ಗೆ ಯಾವುದೇ ತನಿಖೆ ನಡೆಯಲಿ. ಸಹಕಾರ ನೀಡುವುದಾಗಿ ಅವರು ಹೇಳಿದರು.

ಇಲ್ಲಿನ ಸ್ಥಳೀಯರ ನಾಯಕರು ನನ್ನನ್ನು ಗುರಿಯಾಗಿಸಿಕೊಂಡು ಅನ್ವರ್ ಪಾಷಾ ಕೊಲೆಗೆ ನುಂಟು ಇದೆ ಎಂದು ಹೇಳುತ್ತಿದ್ದಾರೆ. ಅಷ್ಟೇ ಅಲ್ಲದೆ, ಈ ಹಿಂದೆಯೂ ಇಂತಹ ಹಲವು ಆರೋಪಗಳನ್ನು ಮಾಡಲಾಗಿದೆ ಎಂದ ಅವರು, ಯಾರೇ ತಪ್ಪು ಮಾಡಿದಲ್ಲಿ ಅವರಿಗೆ ಶಿಕ್ಷೆ ಆಗಲಿ ಎಂದು ತಿಳಿಸಿದರು.

ಅನ್ವರ್ ಪಾಷಾ ಕುಟುಂಬ ಸದಸ್ಯರು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ತದನಂತರ, ಆಯೋಗವೂ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದು ಸಿಐಡಿ ತನಿಖೆ ನಡೆಸುವಂತೆ ಕೋರಿದೆ. ಇದರ ಬಗ್ಗೆ ಯಾವುದೇ ರೀತಿ ಪ್ರತಿಕ್ರಿಯೆ ನೀಡಲ್ಲ. ಒಂದು ವೇಳೆ ಉನ್ನತ ಸಂಸ್ಥೆಗಳಿಂದ ತನಿಖೆ ನಡೆದರೂ, ಅದಕ್ಕೆ ಸಹಕರಿಸಲಿದ್ದು, ಸತ್ಯ ಹೊರಬರಲಿ ಎಂದು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News