ಸುನ್ನೀ ಜಂಇಯ್ಯತುಲ್ ಉಲಮಾ ಕುಪ್ಪೆಟ್ಟಿ ಝೋನಲ್ ನೂತನ ಸಮಿತಿ ಅಸ್ತಿತ್ವಕ್ಕೆ

Update: 2020-07-20 08:29 GMT

ಉಪ್ಪಿನಂಗಡಿ, ಜು.20: ಸುನ್ನೀ ಜಂಇಯ್ಯತುಲ್ ಉಲಮಾ ಕರ್ನಾಟಕ ರಾಜ್ಯ ಸಮಿತಿಯ ನಿರ್ದೇಶನದಂತೆ ಕುಪ್ಪೆಟ್ಟಿ ಹಾಗೂ ಮೂರುಗೋಳಿ ರೇಂಜ್ ಗಳ ವ್ಯಾಪ್ತಿಯಲ್ಲಿ ಕಾರ್ಯಾಚರಿಸುವ ವಿದ್ವಾಂಸರನ್ನೊಳಗೊಂಡ ಸುನ್ನೀ ಜಂಇಯ್ಯತುಲ್ ಉಲಮಾ (ಎಸ್.ಜೆ.ಯು) ಕುಪ್ಪೆಟ್ಟಿ ಝೋನಲ್ ಸಮಿತಿ ಅಸ್ತಿತ್ವಕ್ಕೆ ತರಲಾಯಿತು.

ರವಿವಾರ ರಾತ್ರಿ ಎಸ್.ಜೆ.ಯು ಕೇಂದ್ರ ಸಮಿತಿ ನಾಯಕರಾದ ಖಾಸಿಂ ಉಸ್ತಾದ್ ಕರಾಯ ಹಾಗೂ ಪಿ.ಕೆ ಮದನಿ ಉಸ್ತಾದರ ನೇತೃತ್ವದಲ್ಲಿ ನಡೆದ ಆನ್ ಲೈನ್ ಮೀಟ್ ನಲ್ಲಿ ಪ್ರಸ್ತುತ ಸಮಿತಿಯನ್ನು ನೇಮಿಸಲಾಯಿತು.

ಕೇಂದ್ರ ಸಮಿತಿಯ ಹಿರಿಯ ವಿದ್ವಾಂಸ ಹೈದರ್ ಉಸ್ತಾದ್ ಕರಾಯ ಪಾರ್ಥನೆ ನಡೆಸಿದರು. ಆದಂ ಅಹ್ಸನಿ ಉಸ್ತಾದರು ಉದ್ಘಾಟನಾ ಭಾಷಣ ಮಾಡಿದರು. ಅಬ್ಬಾಸ್ ಮದನಿ ಬಂಡಾಡಿ ಸಮಿತಿ ರಚನೆಯ ಹಿನ್ನಲೆಯನ್ನು ವಿವರಿಸಿದರು. ಬಳಿಕ ಖಾಸಿಂ ಉಸ್ತಾದ್ ರವರು ನೂತನ ಸಮಿತಿಯನ್ನು ಘೋಷಣೆ ಮಾಡಿದರು.

ಎಸ್.ಜೆ.ಯು ನೂತನ ಸಮಿತಿ

ಅಧ್ಯಕ್ಷರಾಗಿ ಹಬೀಬುರ್ರಹ್ಮಾನ್ ಅಹ್ಸನಿ ಬೇಂಗಿಲ, ಉಪಾಧ್ಯಕ್ಷರಾಗಿ ಸಯ್ಯಿದ್ ಕರ್ಪಾಡಿ ತಂಙಳ್, ಇಸ್ಮಾಯಿಲ್ ಸಅದಿ ಕುದ್ರಡ್ಕ, ಪ್ರ.ಕಾರ್ಯದರ್ಶಿಯಾಗಿ ಇಬ್ರಾಹಿಂ ಮದನಿ ಉರುವಾಲು ಪದವು ಅವರನ್ನು ಆಯ್ಕೆ ಮಾಡಲಾಯಿತು. ಜೊ.ಕಾರ್ಯದರ್ಶಿಗಳಾಗಿ ಮಸ್ಹೂದ್ ಸಅದಿ ಉಜಿರೆಬೆಟ್ಟು, ನೌಷಾದ್ ಸಅದಿ ನೆಕ್ಕಿಲು, ಅತಾವುಲ್ಲ ಹಿಮಮಿ ಸಖಾಫಿ ಕುಪ್ಪೆಟ್ಟಿ, ಸಂ.ಕಾರ್ಯದರ್ಶಿಯಾಗಿ ಅಬ್ದುರ್ರಹ್ಮಾನ್ ಸಖಾಫಿ ಅಳಕ್ಕೆ, ಕೋಶಾಧಿಕಾರಿಯಾಗಿ ಪಿ.ಎಸ್ ಇಬ್ರಾಹಿಂ ಮದನಿ ತುರ್ಕಳಿಕೆ ಅವರನ್ನು ಹಾಗೂ ಎರಡು ರೇಂಜ್ ಮೊಹಲ್ಲಾ ಗಳ ಖತೀಬರನ್ನು ಸಮಿತಿಯ ಸದಸ್ಯರನ್ನಾಗಿ ನೇಮಿಸಲಾಯಿತು.

ಬಳಿಕ ಇಬ್ರಾಹಿಂ ಪೈಝಿ ಕಲ್ಪನೆ ಅರಬಿ ಭಾಷಣ ಮಾಡಿದರು. ನೂತನ ಅಧ್ಯಕ್ಷರು ಶುಭ ಹಾರೈಸಿ, ಪ್ರ.ಕಾರ್ಯದರ್ಶಿ ಧನ್ಯವಾದ ಸಮರ್ಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News