ಪುತ್ತೂರು: ಇಂದು ಮೂರು ಕೊರೋನ ಪಾಸಿಟಿವ್ ಪ್ರಕರಣ

Update: 2020-07-20 10:59 GMT

ಪುತ್ತೂರು, ಜು.20: ನಗರ ಪೊಲೀಸ್ ಠಾಣೆಯ 33 ವರ್ಷದ ಮಹಿಳಾ ಪೊಲೀಸ್ ಸಿಬ್ಬಂದಿ ಸೇರಿದಂತೆ ಪುತ್ತೂರಿನಲ್ಲಿ ಸೋಮವಾರ ಮೂರು ಕೊರೋನ ಪಾಸಿಟಿವ್ ಪ್ರಕರಣ ದೃಡಪಟ್ಟಿದೆ. 

ಕೊರೋನ ಪಾಸಿಟಿವ್ ಪತ್ತೆಯಾದ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ಸುಬ್ರಹ್ಮಣ್ಯ ಕೋವಿಡ್ ಚಿಕಿತ್ಸಾ ಕೇಂದ್ರಕ್ಕೆ ದಾಖಲಿಸಲಾಗಿದೆ. 

ಪುತ್ತೂರು ತಾಲೂಕಿನ ಪಡ್ನೂರು ಗ್ರಾಮದ 51 ವರ್ಷದ ಪುರಷರೊಬ್ಬರಲ್ಲಿ ಕೊರೋನ ದೃಡಪಟ್ಟಿದೆ. ಇನ್ನೊಂದು ಪ್ರಕರಣದಲ್ಲಿ ಈಗಾಗಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಉಪ್ಪಿನಂಗಡಿ ರಥಬೀದಿ ನಿವಾಸಿ 58 ವರ್ಷ ಪ್ರಾಯದ ಪುರಷರೊಬ್ಬರಿಗೆ ಕೊರೋನ ದೃಡಪಟ್ಟಿದೆ. 
ಈ ತನಕ ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಒಟ್ಟು 102 ಪ್ರಕರಣಗಳು ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News