ಉಡುಪಿ: ಬಡವರಿಗೆ ಅಕ್ಕಿ ವಿತರಿಸಲು ನೇಜಿ ನೆಡುವ ಕಾರ್ಯಕ್ಕೆ ಚಾಲನೆ

Update: 2020-07-20 14:02 GMT

ಉಡುಪಿ, ಜು.20: ಕೊಳಲಗಿರಿಯ ಸೆಕ್ರೇಡ್ ಹಾರ್ಟ್ ಚರ್ಚ್‌ನ ಕಥೋಲಿಕ್ ಸಭಾ ಘಟಕದ ವತಿಯಿಂದ ಬಡ ಕುಟುಂಬಗಳಿಗೆ ಅಕ್ಕಿ ವಿತರಿಸುವ ಉದ್ದೇಶದಿಂದ ಆರೂರಿನ ಗದ್ದೆಯಲ್ಲಿ ನೇಜಿ ನೆಡುವ ಕಾರ್ಯಕ್ಕೆ ಇಂದು ಚಾಲನೆ ನೀಡಲಾಯಿತು.

ಸುಮಾರು ಐದು ವರ್ಷಗಳಿಂದ ಬಡ ಕುಟುಂಬದ ಸಹಾಯಾರ್ಥವಾಗಿ ನೇಜಿ ನೆಟ್ಟು, ನಂತರ ಕೊಯಿಲು ಮಾಡಿ ಭತ್ತದಿಂದ ಬರುವ ಅಕ್ಕಿಯನ್ನು ಬಡ ಕುಟುಂಬಗಳಿಗೆ ವಿತರಿಸಲಾಗುತ್ತಿದೆ. ಇದರ ಮೊದಲ ಹೆಜ್ಜೆಯಾಗಿ ನೇಜಿ ಕಾರ್ಯ ಘಟಕದ ಅಧ್ಯಕ್ಷ ರೋಷನ್ ಡಿಸೋಜ ಕಾರ್ತಿಬೆಲು ನೇತೃತ್ವದಲ್ಲಿ ಜರಗಿತು.

ಈ ಸಂದರ್ಭದಲ್ಲಿ ಕಲ್ಯಾಣಪುರ ಕಥೋಲಿಕ್ ಸಭಾ ವಾರಾಡೋ ಅಧ್ಯಕ್ಷ ಸಂತೋಷ್ ಕರ್ನೇಲಿಯೋ, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ವಿನ್ಸೆಂಟ್ ಡಿಸೋಜ, ಪಾಲನಾ ಮಂಡಳಿಯ ಸದಸ್ಯರು, ಐಸಿವೈಯಎಂ ಘಟಕದ ಪಧಾಧಿಕಾರಿಗಳು, ಸ್ಥಳೀಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News