ಕಾಪು ತಾಲೂಕಿನಲ್ಲಿ 12 ಮಂದಿಗೆ ಕೊರೋನ ಸೋಂಕು: ಇನ್ನಾದಲ್ಲಿ ಫ್ಯಾಕ್ಟರಿ ಸೀಲ್‌ಡೌನ್

Update: 2020-07-21 14:42 GMT

ಪಡುಬಿದ್ರಿ, ಜು.21: ಕಾಪು ತಾಲೂಕಿನಲ್ಲಿ ಮಂಗಳವಾರ 12 ಮಂದಿಗೆ ಕೊರೋನ ಸೋಂಕು ದೃಢವಾಗಿದ್ದು, ಇನ್ನಾದಲ್ಲಿ ಫ್ಯಾಕ್ಟರಿ ಯೊಂದನ್ನು ಸೀಲ್‌ಡೌನ್ ಮಾಡಲಾಗಿದೆ.

ತಾಲೂಕಿನ ಕಳತ್ತೂರಿನ 84 ವರ್ಷದ ಪುರುಷ, ಪಣಿಯೂರಿನ 30 ವರ್ಷದ ಮಹಿಳೆ, 40 ವರ್ಷದ ಮಹಿಳೆ, 42 ವರ್ಷದ ಮಹಿಳೆ, 16 ವರ್ಷದ ಯುವತಿ, ಪಡುಬಿದ್ರಿಯ 50ವರ್ಷದ ಪುರುಷ, ಪಿಲಾರ್‌ನ 50 ವರ್ಷದ ಮಹಿಳೆ, ಪಡುಬಿದ್ರಿಯ 31 ವರ್ಷದ ಪುರುಷ, ಕುರ್ಕಾಲಿನ 37ವರ್ಷದ ಪುರುಷ, ಪಡುಬೆಳ್ಳೆಯ 49 ವರ್ಷದ ಪುರುಷ, ಕಾಪು ಕೋಟೆ ರೋಡ್‌ನ 72 ವರ್ಷದ ಪುರುಷ ಹಾಗೂ ಶಿರ್ವದ 31ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ.

ಫ್ಯಾಕ್ಟರಿ ಸೀಲ್‌ಡೌನ್: ಇನ್ನಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಫ್ಯಾಕ್ಟರಿಯ 4 ಮಂದಿ ಸಿಬ್ಬಂದಿಗಳಿಗೆ ಸೋಂಕು ದೃಢವಾದ ಹಿನ್ನೆಲೆಯಲ್ಲಿ ಅದನ್ನು ಸೀಲ್‌ಡೌನ್ ಮಾಡಲಾಗಿದೆ. ಪಡುಬಿದ್ರಿಯಲ್ಲಿ ವಾಸ್ತವ್ಯ ಹೂಡಿರುವ ಇಬ್ಬರು, ಅಡ್ವೆ ಹಾಗೂ ಬೆಳ್ಮಣ್‌ನ ತಲಾ ಒಬ್ಬರದಲ್ಲಿ ಸೋಂಕು ದೃಢವಾಗಿದೆ. ಈ ಹಿನ್ನಲೆಯಲ್ಲಿ ಫ್ಯಾಕ್ಟರಿ, ಸಮೀಪದಲ್ಲಿರುವ ಹೊಟೇಲ್ ಹಾಗೂ ಎರಡು ಅಂಗಡಿ ಗಳನ್ನು ಸೀಲ್‌ಡೌನ್ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News