ಆಟವಾಡುತ್ತಿದ್ದಾಗ ವಿದ್ಯುತ್ ಕಂಬ ಸ್ಪರ್ಶಿಸಿ ಬಾಲಕಿ ಮೃತ್ಯು

Update: 2020-07-21 16:12 GMT

ಬೆಂಗಳೂರು, ಜು.21: ರಸ್ತೆ ಬಳಿ ಆಟವಾಡುತ್ತಿದ್ದ ಬಾಲಕಿ ವಿದ್ಯುತ್ ಕಂಬ ಮುಟ್ಟಿದ ಕಾರಣ ವಿದ್ಯುತ್ ಹರಿದು ಮೃತಪಟ್ಟಿರುವ ಘಟನೆ ನಗರದ ಕಾವಲಭೈರಸಂದ್ರದ ಬಳಿ ನಡೆದಿದೆ.

8 ವರ್ಷದ ಫಾತಿಮಾ ಮೃತ ಬಾಲಕಿ ಎಂದು ತಿಳಿದುಬಂದಿದೆ.

ಸೋಮವಾರ ಸಂಜೆ ಧಾರಾಕಾರವಾಗಿ ಮಳೆ ಸುರಿದಿದ್ದು, ಆ ಬಳಿಕ ಬಾಲಕಿ ಆಟವಾಡಲು ಮನೆಯ ಹೊರಗಡೆ ರಸ್ತೆ ಬಳಿ ಬಂದಿದ್ದಾಳೆ. ಆಟವಾಡುತ್ತಾ ಬಂದು ವಿದ್ಯುತ್ ಕಂಬ ಮುಟ್ಟಿದ್ದಾಳೆ. ಮಳೆ ಬಂದು ಮೊದಲೇ ಒದ್ದೆಯಾಗಿದ್ದ ಕಂಬದಿಂದ ವಿದ್ಯುತ್ ಹರಿದು ಅವಘಡ ಸಂಭವಿಸಿದೆ.

ವಿಚಾರ ತಿಳಿದು ಬಿಬಿಎಂಪಿ ಹಾಗೂ ಬೆಸ್ಕಾಂ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಆರ್.ಟಿ. ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News