ಸಿಇಟಿ ಪರೀಕ್ಷೆ ದಿನಾಂಕ ಬದಲಾವಣೆ ಅಸಾಧ್ಯ: ಡಿಸಿಎಂ ಅಶ್ವತ್ಥ ನಾರಾಯಣ

Update: 2020-07-22 17:20 GMT

ಮಂಗಳೂರು: ಜುಲೈ 30, 31 ರಂದು ನಡೆಯುವ ಸಿಇಟಿ ಪರೀಕ್ಷೆಯ ದಿನ ಬದಲಾವಣೆ ಮಾಡುವುದು ಅಸಾಧ್ಯ. ಈಗಾಗಲೇ ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ನೀಡಲಾಗಿದೆ. ಪರೀಕ್ಷಾ ಸೆಂಟರ್ ಗಳಲ್ಲಿ ಬೇಕಾಗಿರುವ ಎಲ್ಲಾ ಪೂರ್ವಸಿದ್ಧತೆಗಳು ಮಾಡಲಾಗಿದೆ ಎಂದು ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾ. ಸಿ.ಎನ್. ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದ್ದಾರೆ.

ಜುಲೈ 31ರಂದು ಕರಾವಳಿ ಜಿಲ್ಲೆಗಳು ಸೇರಿದಂತೆ ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಈದುಲ್ ಅಝ್'ಹಾ (ಬಕ್ರೀದ್) ನಡೆಯುತ್ತಿರುವುದರಿಂದ ಸಿಇಟಿ ಪರೀಕ್ಷೆ ದಿನ ಬದಲಾಯಿಸಲು ಸರಕಾರದಲ್ಲಿ ವಿನಂತಿಸುವಂತೆ ಶಾಸಕ ಯು.ಟಿ.ಖಾದರ್ ಅವರಲ್ಲಿ ಜಿಲ್ಲಾ ವಕ್ಫ್ ಸದಸ್ಯ ರಶೀದ್ ವಿಟ್ಲ ಮನವಿ ಮಾಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಯು.ಟಿ.ಖಾದರ್, ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಹಾಗೂ ಸರಕಾರದ ಮುಖ್ಯಕಾರ್ಯದರ್ಶಿ ಅವರ ಗಮನಕ್ಕೆ ತಂದರು. ಇದನ್ನು ಪರಿಶೀಲಿಸಿರುವ ಉಪಮುಖ್ಯಮಂತ್ರಿ ಈಗಾಗಲೇ 1.94 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಿ ನಡೆಸಿದ್ದು, ಸರ್ವ ಸಿದ್ಧತೆ ಮಾಡಲಾಗಿದೆ. ಈದ್ ದಿನ ಸಿಇಟಿ ಪರೀಕ್ಷೆಗೆ ಮುಸ್ಲಿಂ ವಿದ್ಯಾರ್ಥಿಗಳು ಸಮಯಾವಕಾಶ ಮಾಡಿ ಸಹಕರಿಸುವಂತೆ ಅವರು ವಿನಂತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News