ಕೊರೋನ ಪರೀಕ್ಷೆಯ ದರ ಮರುನಿಗದಿಪಡಿಸಿದ ಸರಕಾರ

Update: 2020-07-25 05:02 GMT

ಬೆಂಗಳೂರು, ಜು.25: ಕೊರೋನ ವೈರಸ್ ಸೋಂಕಿನ ಪರೀಕ್ಷೆಯ ದರವನ್ನು ಮರುನಿಗದಿ ಮಾಡಿ ಸರಕಾರ ಆದೇಶ ಹೊರಡಿಸಿದೆ.

ಸರಕಾರದಿಂದ ಖಾಸಗಿ ಲ್ಯಾಬ್‌ಗಳಿಗೆ ಕಳುಹಿಸುವ ಆರ್‌ಟಿ-ಪಿಸಿಆರ್ ಕೋವಿಡ್ ಪರೀಕ್ಷೆಗೆ 2,000 ರೂ. ನಿಗದಿ ಮಾಡಲಾಗಿದೆ. ಅದೇರೀತಿ ಸ್ವಯಂಪ್ರೇರಣೆಯಿಂದ ಖಾಸಗಿಯಾಗಿ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಡುವರಿಗೆ ಗರಿಷ್ಠ 3,000 ರೂ. ಮತ್ತು ರಾಪಿಡ್ ಆ್ಯಂಟಿಜೆನ್ ಪರೀಕ್ಷೆಗೆ 700 ರೂ. ದರ ನಿಗದಿ ಮಾಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News