ಕಲಿಕಾ ವಿಸ್ತರಣೆ ಅಗತ್ಯ: ನಾರಾಯಣ ಎಂ.ಪೈ

Update: 2020-07-25 13:33 GMT

ಉಡುಪಿ, ಜು.24: ಈಗಿನ ಕಾಲಘಟ್ಟದಲ್ಲಿ ತಂತ್ರಜ್ಞಾನದ ಉಪಯೋಗ ಅತ್ಯಗತ್ಯವಾಗಿದ್ದು, ಅದನ್ನು ಸಮರ್ಥವಾಗಿ ಬಳಸಿಕೊಂಡು ಅವಕಾಶಗಳನ್ನು ಕಲ್ಪಿಸಿಕೊಳ್ಳಬೇಕು. ಕಲಿಕಾ ವಿಸ್ತರಣೆ ಜೀವನದ ಅಭಾಜ್ಯ ಅಂಗ. ಆನ್‌ಲೈನ್ ಕಲಿಕಾ ಯುಗದಲ್ಲಿ ಇ-ಬುಕ್ಸ್‌ಗಳು ಅತ್ಯಂತ ಪ್ರಸ್ತುತ ಎಂದು ಮಣಿಪಾಲದ ಖ್ಯಾತ ಉದ್ಯಮಿ ಹಾಗು ಬಸ್ರೂರು ಮಹಾಲಸಾ ನಾರಾಯಣಿ ದೇವಸ್ಥಾನದ ಆಡಳಿತ ಮೊಕ್ತೇಸರ ಟಿ.ನಾರಾಯಣ ಎಂ. ಪೈ ಹೇಳಿದ್ದಾರೆ.

ಎಂ.ಜಿ.ಎಂ. ಕಾಲೇಜಿನ ಕಂಪ್ಯೂಟರ್ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ವಿಶ್ವನಾಥ ಪೈ ಮೂರೂರು ಇವರು ರಚಿಸಿದ ಏಳು ಇನ್‌ಫಾರ್ಮೇಶನ್ ಟೆಕ್ನಾಲಜಿ ಹಾಗೂ ಮೂರು ಪ್ರವಾಸ ಕಥನಗಳ ಒಟ್ಟು 10 ಇ-ಬುಕ್ಸ್‌ಗಳ ಗುಚ್ಚವನ್ನು ಮಣಿಪಾಲದಲ್ಲಿ ಅನಾವರಣಗೊಳಿಸಿ ಅವರು ಮಾತನಾಡುತಿದ್ದರು.

ದೇವಸ್ಥಾನದ ಆಡಳಿತ ಮಂಡಳಿಯ ಕೆ.ಗೋಕುಲ್‌ದಾಸ್ ಪೈ, ಬಿ. ಜಿ. ಪೈ, ಗಣೇಶ್ ಪ್ರಭು ಕುಂಭಾಶಿ ಹಾಗೂ ಎಸ್.ಪ್ರಭಾಕರ್ ಪೈ ಉಪಸ್ಥಿತರಿದ್ದು ಶುಭ ಹಾರೈಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News