ಮುತ್ತೂರು: ಎರಡು ಪಂಪ್ ಕಳವು

Update: 2020-07-25 15:26 GMT

ಗುರುಪುರ, ಜು.25: ಮುತ್ತೂರು ಗ್ರಾಪಂ ಅಧೀನದ ಕುಡಿಯುವ ನೀರಿನ ಎರಡು ಪಂಪ್ಗಳು ಕಳವಾಗಿದ್ದು, ಗ್ರಾಪಂ ಪಿಡಿಒ ವಸಂತಿ ಬಜ್ಪೆಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಗುರುವಾರ ರಾತ್ರಿ ಕಳವಾಗಿರುವ 10 ಮತ್ತು 15 ಅಶ್ವಶಕ್ತಿಯ ಎರಡು ಪಂಪ್ಗಳ ಮೌಲ್ಯ 85,000 ರೂ. ಎಂದು ಅಂದಾಜಿಸಲಾಗಿದೆ. ನೋಣಾಲು ಮತ್ತು ಮುತ್ತೂರಿಗೆ ಫಲ್ಗುಣಿ ನದಿಯಿಂದ ಕುಡಿಯುವ ನೀರು ಪೂರೈಸಲು ಈ ಪಂಪ್ಗಳನ್ನು ನದಿ ಭಾಗದಲ್ಲಿ ಅಳವಡಿಸಲಾಗಿದ್ದು, ಮಳೆಗಾಲದಲ್ಲಿ ನೀರಿನಿಂದ ಹೊರತೆಗೆಯಲಾಗಿ ಶೆಡ್ನಲ್ಲಿ ಜಾಗವಿಲ್ಲದ ಕಾರಣ ಹೊರಗಡೆ ಇಡಲಾಗಿತ್ತು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News