ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ 21 ಕೊರೋನ ಪಾಸಿಟಿವ್ ಪ್ರಕರಣ ದೃಢ

Update: 2020-07-26 06:54 GMT

ಪುತ್ತೂರುಮ ಜು.26: ನಗರ ಸಭಾ‌ ಇಂಜಿನಿಯರ್ 28 ವರ್ಷದ ಯುವಕ ಸೇರಿದಂತೆ ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ರವಿವಾರ ಒಟ್ಟು 21 ಕೊರೋನ ಪಾಸಿಟಿವ್ ಪ್ರಕರಣ ದೃಢಪಟ್ಟಿದೆ.

ನೆಟ್ಟಣಿಗೆ ಮುಡ್ನೂರು ಗ್ರಾಮದ 68 ಮತ್ತು 49 ವರ್ಷದ ಇಬ್ಬರು ಮಹಿಳೆಯರು, ಚಿಕ್ಕ ಮುಡ್ನೂರು ಗ್ರಾಮದ 49 ವರ್ಷದ ಮಹಿಳೆ, ಪುತ್ತೂರು ‌ನಗರದ 63 ವರ್ಷದ ಪುರುಷ, ಪುತ್ತೂರು ನಗರದ ಬಸ್ಸು‌ ನಿಲ್ದಾಣದ ಬಳಿಯ ಚಿನ್ನಾಭರಣ ಮಳಿಗೆಯ 36 ವರ್ಷದ ನಾಲ್ವರು ಹಾಗೂ 32 ವರ್ಷದ ಇಬ್ಬರು ಸೇರಿದಂತೆ ಒಟ್ಟು 6 ಮಂದಿ ಸಿಬ್ಬಂದಿ, ನಗರದ ‌ಉರ್ಲಾಂಡಿ ಎಂಬಲ್ಲಿನ 20 ವರ್ಷದ ಯುವಕ, ಬಲ್ನಾಡಿನ 50 ವರ್ಷದ ಮಹಿಳೆ ಮತ್ತು ಕಬಕ ನಿವಾಸಿ ‌58 ವರ್ಷದ ಪುರುಷರೊಬ್ಬರಲ್ಲಿ ಕೊರೋನ ಪಾಸಿಟಿವ್ ದೃಢಪಟ್ಟಿದೆ.

ನಗರದ ಬಸ್ಸು ನಿಲ್ದಾಣದ ಬಳಿಯಲ್ಲಿರುವ ಚಿನ್ನಾಭರಣ ಮಳಿಗೆ ಹಾಗೂ ಪುತ್ತೂರು ನಗರಸಭಾ ಕಚೇರಿಯನ್ನು ಸರ್ಕಾರದ ನಿಯಮದಂತೆ ಶನಿವಾರದಿಂದ 48 ಗಂಟೆಗಳ ಕಾಲ ಸೀಲ್‌ ಡೌನ್ ಮಾಡಲಾಗಿದೆ. ಸೋಮವಾರ ಕಚೇರಿ ಎಂದಿನಂತೆ ತೆರೆಯಲಿದೆ. 

ಕಡಬ ತಾಲೂಕಿನಲ್ಲಿ: 

ಕಡಬ ತಾಲೂಕಿನ ಕೊಯ್ಲ ಗ್ರಾಮದ ವಳಕಡಮ ಎಂಬಲ್ಲಿನ ಮನೆಯೊಂದರ 65 ವರ್ಷದ ಮಹಿಳೆ, 17 ಹಾಗೂ 29 ವರ್ಷ ವಯಸ್ಸಿನ ಇಬ್ಬರು ‌ಯುವತಿಯರು, ಆಲಂಕಾರು ಗ್ರಾಮದ 30 ಹಾಗೂ 34 ವರ್ಷದ ದಂಪತಿ, ಬಿಳಿನೆಲೆ ಗ್ರಾಮದ 25 ವರ್ಷದ ಯುವಕ ಮತ್ತು ಕುಟ್ರುಪ್ಪಾಡಿ ಗ್ರಾಮದ 54 ವರ್ಷದ ಪುರುಷರಲ್ಲಿ ಕೊರೋನ ಪಾಸಿಟಿವ್ ದೃಢಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News