ಉಡುಪಿಯಲ್ಲಿ ಭಾರೀ ಮಳೆ ಸಾಧ್ಯತೆ

Update: 2020-07-26 13:56 GMT

ಉಡುಪಿ, ಜು.26: ಉಡುಪಿ ಜಿಲ್ಲೆ ಸೇರಿದಂತೆ ಕರಾವಳಿಯಲ್ಲಿ ಮುಂದಿನ 24ಗಂಟೆಗಳ ಅವಧಿಯಲ್ಲಿ 65ಮಿ. ಮೀಟರ್‌ಗೂ ಅಧಿಕ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ವರದಿ ತಿಳಿಸಿದೆ.

ಕಳೆದ 24ಗಂಟೆಯಲ್ಲಿ ಉಡುಪಿ ಜಿಲ್ಲೆಯಲ್ಲಿ 20.0ಮಿ.ಮೀ ಮಳೆಯಾಗಿದ್ದು, ಉಡುಪಿ- 22.0 ಮಿ.ಮೀ., ಕುಂದಾಪುರ- 29.0ಮಿ.ಮೀ., ಕಾರ್ಕಳ- 10.0 ಮಿ.ಮೀ. ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಜಿಲ್ಲೆಯಲ್ಲಿ ಇಂದು ಮಧ್ಯಾಹ್ನ ವೇಳೆ ಸಾದಾರಣ ಮಳೆಯಾಗಿದ್ದು, ಉಳಿದಂತೆ ಬೆಳಗ್ಗೆ ಬಿಸಿಲು ಹಾಗೂ ಸಂಜೆ ಮೊಡ ಕವಿದ ವಾತಾವರಣ ಕಂಡುಬಂತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News