ತುಂಬೆ ಗ್ರೂಪ್ ಮತ್ತು ಬಿಸಿಎಫ್ ಸಹಯೋಗ: ಎರಡನೇ ಚಾರ್ಟರ್ಡ್ ವಿಮಾನದಲ್ಲಿ ಮಂಗಳೂರು ತಲುಪಿದ 178 ಕನ್ನಡಿಗರು

Update: 2020-07-26 17:34 GMT

ಮಂಗಳೂರು, ಜು.26: ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಯುಎಇಯಲ್ಲಿ ಸಿಲುಕಿದ್ದ ಕನ್ನಡಿಗರನ್ನು ಕರೆತಂದ ಚಾರ್ಟರ್ಡ್ ವಿಮಾನ ಯುಎಇಯ ವಿಮಾನ ನಿಲ್ದಾಣದಿಂದ ಜುಲೈ 25ರಂದು ಪ್ರಯಾಣ ಆರಂಭಿಸಿ ಮಂಗಳೂರು ವಿಮಾನ ನಿಲ್ದಾಣ ತಲುಪಿದೆ. ತುಂಬೆ ಸಮೂಹ ಸಂಸ್ಥೆ ಹಾಗೂ ಬ್ಯಾರೀಸ್ ಕಲ್ಚರಲ್ ಫೋರಂ(ಬಿಸಿಎಫ್) ಬಾಡಿಗೆ ವಿಮಾನದ ವ್ಯವಸ್ಥೆ ಮಾಡಿದೆ.

ಅಸ್ವಸ್ಥರು, ಹಿರಿಯ ನಾಗರಿಕರು ಹಾಗೂ ತುರ್ತು ವೈದ್ಯಕೀಯ ನೆರವಿನ ಅಗತ್ಯವಿರುವವರು, ಮಕ್ಕಳು, ವೀಸಾ ಸಮಸ್ಯೆ ಹಾಗೂ ಉದ್ಯೋಗ ಸಮಸ್ಯೆ ಎದುರಿಸುತ್ತಿದ್ದವರ ಸಹಿತ 178 ಪ್ರಯಾಣಿಕರು ವಿಮಾನದಲ್ಲಿದ್ದರು.

ತುಂಬೆ ಗ್ರೂಪ್ ಅಧ್ಯಕ್ಷ ಹಾಗೂ ಬಿಸಿಎಫ್ ಸ್ಥಾಪಕ ಪೋಷಕರೂ ಆಗಿರುವ ಡಾ.ತುಂಬೆ ಮೊಯ್ದಿನ್, ಬಿಸಿಎಫ್ ಅಧ್ಯಕ್ಷ ಡಾ. ಬಿ.ಕೆ. ಯೂಸುಫ್, ಪ್ರಧಾನ ಕಾರ್ಯದರ್ಶಿ ಡಾ. ಕಾಪು ಮುಹಮ್ಮದ್, ತುಂಬೆ ಸಮೂಹ ಸಂಸ್ಥೆಗಳ ಪ್ರತಿನಿಧಿಗಳಾದ ಫರ್ಹಾದ್ ಸಿ, ಫರ್ವಾಝ್ ಪಿಸಿ ಮತ್ತಿತರರು ಕನ್ನಡಿಗರನ್ನು ಸ್ವದೇಶಕ್ಕೆ ಕರೆ ತಂದ ವಿಮಾನವನ್ನು ಯುಎಇಯಲ್ಲಿ ಬೀಳ್ಕೊಟ್ಟರು.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಿಸಿಎಫ್‌ನ ಪೋಷಕ ಮುಮ್ತಾಝ್ ಅಲಿ, ವಿಧಾನ ಪರಿಷತ್ ಸದಸ್ಯ ಬಿಎಂ ಫಾರೂಕ್, ಮಾಜಿ ಶಾಸಕ ಮೊಯ್ದಿನ್ ಬಾವ, ಯುಟಿ ಇಫ್ತಿಕಾರ್, ಬಿಸಿಸಿಐ ಕೇಂದ್ರ ಸಮಿತಿಯ ಅಧ್ಯಕ್ಷ ಎಸ್ ಎಂ.ರಶೀದ್ ಹಾಜಿ ಮುಂತಾದವರು ಪ್ರಯಾಣಿಕರನ್ನು ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News