ಪುತ್ತೂರಿನ ಡಾ.ವಿವೇಕ್ ಕಜೆಗೆ ಅಮೆರಿಕದಲ್ಲಿ ನಡೆಯುವ ವಿಶ್ವಮಟ್ಟದ ಸರ್ಜಿಕಲ್ ಸಮ್ಮೇಳನಕ್ಕೆ ಆಹ್ವಾನ

Update: 2020-07-28 07:25 GMT

ಪುತ್ತೂರು, ಜು.28: ಪುತ್ತೂರಿನ ಯುವ ವೈದ್ಯರೊಬ್ಬರು ವೃದ್ಧೆಯೊಬ್ಬರಿಗೆ ನಡೆಸಿದ ಲ್ಯಾಪರೋಸ್ಕೋಪಿಕ್ ಹರ್ನಿಯಾ ಚಿಕಿತ್ಸೆಯ ಕಾರ್ಯವಿಧಾನವನ್ನು ಅಮೆರಿಕದ ವೈದ್ಯರ ಸಂಘ ಗುರುತಿಸಿ ಆಗಸ್ಟ್‌ನಲ್ಲಿ ಅಮೆರಿಕಾದಲ್ಲಿ ನಡೆಯುವ ವಿಶ್ವಮಟ್ಟದ ಸರ್ಜಿಕಲ್ ಸಮ್ಮೇಳನಕ್ಕೆ ಆಹ್ವಾನಿಸಿದೆ.

ಪುತ್ತೂರಿನ ಧನ್ವಂತರಿ ಆಸ್ಪತ್ರೆಯ ಸರ್ಜಿಕಲ್ ಗ್ಯಾಸ್ಟ್ರೋ ಎಂಟರಾಲಜಿ ತಜ್ಞ ವೈದ್ಯ ಡಾ.ವಿವೇಕ್ ಕಜೆ ಅವರು ನಡೆಸಿದ ಲ್ಯಾಪರೋಸ್ಕೋಪಿಕ್ ಹರ್ನಿಯಾ ಚಿಕಿತ್ಸೆಯ ಕಾರ್ಯವಿಧಾನವನ್ನು ಅಮೆರಿಕದ ಸೊಸೈಟಿ ಆಫ್ ಲ್ಯಾಪರೋಸ್ಕೋಪಿಕ್ ಮತ್ತು ರೋಬೋಟಿಕ್ ಸರ್ಜನ್ಸ್ (ಎಸ್.ಎಲ್.ಎಸ್) ಸಂಘವು ವಿಶ್ವಮಟ್ಟದಲ್ಲಿ ಆಗಸ್ಟ್ 26 ಮತ್ತು 27ರಂದು ನಡೆಯುವ ವಾರ್ಷಿಕ ಸಮ್ಮೇಳನದಲ್ಲಿ ಪ್ರಸ್ತುತ ಪಡಿಸಲು ಆಹ್ವಾನಿಸಿದೆ.

ಕಳೆದ ಡಿಸೆಂಬರ್‌ನಲ್ಲಿ 77 ವರ್ಷ ಪ್ರಾಯದ ವೃದ್ಧೆಯೊಬ್ಬರು ಯಕೃತ್ ವೈಫಲ್ಯ (ಸಿರೋಸಿಸ್ ಆಫ್ ಲಿವರ್) ಸಮಸ್ಯೆ ಹಾಗೂ ಹೊಕ್ಕಳಿನ ಸಂಕೀರ್ಣ ಹರ್ನಿಯಾ (ಇರೆಡ್ಯುಕಿಬಲ್ ಹೇಮಿಯಾ) ಸಮಸ್ಯೆಯಿಂದ ಬಳಲುತ್ತಿದ್ದರು. ಇಂತಹ ಒಂದು ಸಂಕೀರ್ಣವಾದ ಸಮಸ್ಯೆಯನ್ನು ಡಾ.ವಿವೇಕ್ ಕಜೆ ಅವರು ಲ್ಯಾಪರೋಸ್ಕೋಪಿಕ್ ಶಸ್ತ್ರಚಿಕಿತ್ಸೆಯಿಂದ ಯಶಸ್ವಿಯಾಗಿ ಪರಿಹರಿಸಿದ್ದರು. ವೃದ್ಧಾಪ್ಯ, ಲಿವರ್ ಕಾಯಿಲೆ ಮತ್ತು ಹರ್ನಿಯಾದ ಆಪತ್ಕಾಲೀನ ಸ್ಥಿತಿ ಇಂತಹ ಜಟಿಲ ಸಮಸ್ಯೆಗಳನ್ನು ಪಕ್ವವಾಗಿ ನಿಭಾಯಿಸಿದ ಡಾ.ವಿವೇಕ್‌ರ ವಿಧಾನವನ್ನು ಗುರುತಿಸಿದ ಅಮೆರಿಕದ ವೈದ್ಯರ ಸಂಘವು, ತಮ್ಮ ಸಮ್ಮೇಳನದಲ್ಲಿ ಪ್ರಸ್ತುತಪಡಿಸಲು ಕರೆ ನೀಡಿದೆ.

ಡಾ.ವಿವೇಕ್ ಕಜೆ ಅವರು ಧನ್ವಂತರಿ ಆಸ್ಪತ್ರೆಯ ಡಾ.ಕೆ.ರವೀಂದ್ರ ಅವರ ಪುತ್ರ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News