ಕಾಂಚನ ಹೋಂಡಾ: ಬಕ್ರೀದ್-ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಆಕರ್ಷಕ ಕೊಡುಗೆ

Update: 2020-07-29 14:35 GMT

ಮಂಗಳೂರು, ಜು.29: ವಾಹನ ಮಾರಾಟ ಮತ್ತು ಸೇವೆಯಲ್ಲಿ ಅನುಭವ ಹೊಂದಿರುವ ಹಾಗೂ ಕರಾವಳಿಯಾದ್ಯಂತ ಹಲವು ವರ್ಷಗಳಿಂದ ಗ್ರಾಹಕರಿಗೆ ತೃಪ್ತಿದಾಯಕ ಸೇವೆ ನೀಡುತ್ತಿರುವ ಕಾಂಚನ ಮೋಟಾರ್ಸ್‌ನ ಅಂಗಸಂಸ್ಥೆ ಕಾಂಚನ ಹೋಂಡಾವು ದ.ಕ. ಜಿಲ್ಲೆಯಲ್ಲಿ ಅತಿಹೆಚ್ಚು ದ್ವಿಚಕ್ರ ವಾಹನ ಮಾರಾಟ ಮಾಡುವ ಡೀಲರ್ ಆಗಿದೆ.

ಬಕ್ರೀದ್ ಹಾಗೂ ವರಮಹಾಲಕ್ಷ್ಮೀ ಹಬ್ಬಗಳ ಪ್ರಯುಕ್ತ ಕಾಂಚನ ಹೋಂಡಾದಿಂದ ದ.ಕ. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ 4,000 ರೂ. ಎಕ್ಸೆಸ್ಸರೀಸ್'‌ನ್ನು ಉಚಿತವಾಗಿ ನೀಡಲಾಗುತ್ತಿದೆ. ಜೊತೆಗೆ ಗ್ರಾಹಕರಿಗೆ ವಿಶೇಷ ರಿಯಾಯಿತಿಗಳನ್ನು ನೀಡಲಾಗುತ್ತದೆ. ಈ ಕೊಡುಗೆಯು ಜು.25ರಿಂದ 31ರವರೆಗೆ ಲಭ್ಯವಿದೆ.

ಅಲ್ಲದೆ, ದ್ವಿಚಕ್ರ ವಾಹನ ಖರೀದಿಗೆ ಕೇವಲ 6,666 ರೂ. ಮುಂಗಡ ಪಾವತಿ ಹಾಗೂ ಅತಿ ಕಡಿಮೆ ಬಡ್ಡಿದರದಲ್ಲಿ ಸ್ಥಳದಲ್ಲೇ ಸಾಲ ಮಂಜೂರಾತಿ ನೀಡಲಾಗುವುದು. ಈ ಸೌಲಭ್ಯವು ಕಾಂಚನಾ ಹೋಂಡಾದ ಎಲ್ಲ ಶೋರೂಂಗಳಲ್ಲಿ ಲಭ್ಯವಿದೆ.

ಕಾಂಚನ ಹೋಂಡಾದಿಂದ ಗ್ರಾಹಕರಿಗೆಂದೇ ವಿಶೇಷ ಕೊಡುಗೆ ನೀಡಲಾಗುತ್ತಿದ್ದು, ಈ ಸುವರ್ಣಾವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ. ಪ್ರತಿ ವಾಹನ ಖರೀದಿಯ ಮೇಲೆ ವಿಶೇಷ ರಿಯಾಯಿತಿಯೊಂದಿಗೆ ಹೋಂಡಾ ರೈನ್ ಕೋಟ್, ಹೆಲ್ಮೆಟ್, ಸೈಡ್ ಸ್ಟಾಂಡ್, ಲೇಡೀಸ್ ಫೂಟ್‌ರೆಸ್ಟ್, ಹೋಂಡಾ ಟೀ-ಶರ್ಟ್, 15 ಲಕ್ಷ ರೈಡರ್ ಇನ್ಶೂರೆನ್ಸ್‌ನ್ನು ಸಂಸ್ಥೆ ನೀಡಲಿದೆ.

‘ಸುರಕ್ಷಿತ ಅಂತರ’ಕ್ಕಾಗಿ ದ್ವಿಚಕ್ರ ವಾಹನ ಖರೀದಿ: ಕೊರೋನ ಸೋಂಕು ವಿಶ್ವಾದ್ಯಂತ ತಲ್ಲಣ ಸೃಷ್ಟಿಸಿರುವ ನಡುವೆಯೇ ಎಲ್ಲರೂ ಸುರಕ್ಷಿತ ಅಂತರ ಕಾಪಾಡುವುದು ಇಂದಿನ ಅತ್ಯಂತ ತುರ್ತು ಅಗತ್ಯವಾಗಿದೆ.

ಸುರಕ್ಷಿತ ಅಂತರಕ್ಕಾಗಿಯೇ ಪ್ರಸಕ್ತ ದಿನಮಾನಗಳಲ್ಲಿ ದ್ವಿಚಕ್ರ ವಾಹನಗಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿದೆ. ಅಂದಹಾಗೆ ಈಗ ದ್ವಿಚಕ್ರ ವಾಹನ ಖರೀದಿಸುವುದು ಮೊದಲಿಗಿಂತಲೂ ಸುಲಭವಾಗಿದೆ. ಎಲ್ಲ ವರ್ಗಗಳ ಜನತೆಯು ಸಮರೋಪಾದಿಯಲ್ಲಿ ಬಂದು ದ್ವಿಚಕ್ರ ವಾಹನಗಳನ್ನು ಖರೀದಿಸುತ್ತಿದ್ದಾರೆ. ಜೂನ್, ಜುಲೈ ತಿಂಗಳಲ್ಲಿ ನಿರೀಕ್ಷೆಗೂ ಮೀರಿ ದ್ವಿಚಕ್ರ ವಾಹನ ಮಾರಾಟವಾಗಿದೆ. ಪ್ರತಿದಿನವೂ 100ಕ್ಕೂ ಹೆಚ್ಚು ಗ್ರಾಹಕರು ಶೋರೂಂಗಳಿಗೆ ಭೇಟಿ ನೀಡುತ್ತಿದ್ದಾರೆ.

ಈಗಾಗಲೇ ಹೋಂಡಾ ಸಂಸ್ಥೆಯಿಂದ ಹೊಸ ‘ಬಿಎಸ್6’ ತಂತ್ರಜ್ಞಾನದೊಂದಿಗೆ ಬಿಡುಗಡೆಯಾದ ಹೋಂಡಾ ಆಕ್ಟಿವಾ 125, ಗ್ರಾಝಿಯ 125, ಲಿವೊ, ಎಕ್ಸ್-ಬ್ಲೇಡ್, ಆಕ್ಟಿವಾ 6 ಜಿ, ಡಿಯೋ, ಶೈನ್, ಎಸ್‌ಪಿ 125, ಯೂನಿಕಾರ್ನ್, ಸಿಡಿ 110 ಸಾಯ್ಲೆಂಟ್ ಸ್ಟಾಟ್‌ನಿಂದ ಪ್ರಶಂಸೆಗೆ ಪಾತ್ರವಾಗಿದೆ. ಹಾಗೆಯೇ ಶೇ.10ರಿಂದ 16ರವರೆಗೆ ಅಧಿಕ ಮೈಲೇಜ್ ಸಿಗಲಿದೆ ಎಂದು ಕಾಂಚನ ಹೋಂಡಾ ಸಂಸ್ಥೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News