ರಾಜ್ಯಮಟ್ಟದ ಆನ್‌ಲೈನ್ ಸಾಂಸ್ಕೃತಿಕ ಸ್ಪರ್ಧೆ ‘ಕಲಾಭಿವ್ಯಕ್ತಿ’

Update: 2020-08-08 15:59 GMT

ಉಡುಪಿ, ಆ.8: ಉಡುಪಿಯ ತ್ರಿಶಾ ಗ್ರೂಪ್ ಆಫ್ ಇನ್ಸಿಟ್ಯೂಶನ್ಸ್ ವತಿಯಿಂದ ರಾಜ್ಯ ಮಟ್ಟದ ಆನ್‌ಲೈನ್ ಸಾಂಸ್ಕೃತಿಕ ಸ್ಪರ್ಧೆ ‘ಕಲಾಭಿವ್ಯಕ್ತಿ- 2020’ನ್ನು ಏರ್ಪಡಿಸಲಾಗಿದೆ ಎಂದು ತ್ರಿಶಾ ವಿದ್ಯಾ ಕಾಲೇಜಿನ ಪ್ರಾಂಶುಪಾಲ ಗುರುಪ್ರಸಾದ ರಾವ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಈ ವರ್ಷ ದ್ವಿತೀಯ ಪಿಯುಸಿ ಕಾಮರ್ಸ್ ಉತ್ತೀರ್ಣರಾದ ವಿದ್ಯಾರ್ಥಿ ಗಳಿಗೆ ಮಾತ್ರ ಇದರಲ್ಲಿ ಭಾಗವಹಿಸುವ ಅವಕಾಶವಿದೆ. ಹಾಡಿನ ವಿಭಾಗದಲ್ಲಿ ಚಲನಚಿತ್ರ ಗೀತೆ, ಭಾವಗೀತೆ, ಅಭಿನಯ ವಿಭಾಗದಲ್ಲಿ ಏಕಪಾತ್ರಾಭಿನಯ, ಸೃಜನಶೀಲತೆ ವಿಭಾಗದಲ್ಲಿ ಮ್ಯಾಡ್ ಆಡ್, ವಾದನ ವಿಭಾಗದಲ್ಲಿ ತಂತಿವಾದ್ಯ, ಚರ್ಮವಾದ್ಯ, ನೃತ್ಯ ವಿಭಾಗದಲ್ಲಿ ಪಾಶ್ಚಾತ್ಯ ನೃತ್ಯ, ಭರತನಾಟ್ಯ, ಜಾನಪದ ನೃತ್ಯ, ಭಾಷಣ ವಿಭಾಗದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷಣ ಸ್ಪರ್ಧೆಗಳಿವೆ.

ಎಲ್ಲವೂ ವೈಯಕ್ತಿಕ ಸ್ಪರ್ಧೆಗಳಾಗಿದ್ದು ವಿದ್ಯಾರ್ಥಿಗಳು ಅವರವರ ಮನೆಯಲ್ಲಿ ವೀಡಿಯೋ ಮಾಡಿ ನಮಗೆ ಕಳುಹಿಸಬೇಕು. ಹೆಸರು ನೊಂದಾವಣೆ (ಮೊ- 6361358012, 8861193454)ಗೆ ಆ.10 ಕೊನೆಯ ದಿನಾಂಕ. ಪ್ರಥಮ, ದ್ವಿತೀಯ, ತೃತೀಯ ಪ್ರಶಸ್ತಿಗಳ ಜೊತೆ ವೈಯಕ್ತಿಕ ಚಾಂಪಿಯನ್ ಮತ್ತು ಸಮಗ್ರ ಪ್ರಶಸ್ತಿ ನೀಡಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News