ಗಣೇಶ ಚರ್ತುಥಿ ಸಾರ್ವಜನಿಕವಾಗಿ ಆಚರಣೆಗೆ ಅವಕಾಶ ಇಲ್ಲ: ಉಡುಪಿ ಡಿಸಿ

Update: 2020-08-15 14:33 GMT

ಉಡುಪಿ, ಆ.15: ಕೊರೋನ ವೈರಸ್ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಮಾರ್ಗಸೂಚಿ ಹಾಗೂ ರಾಜ್ಯ ಸರಕಾರದ ಆದೇಶದಂತೆ ಈ ಬಾರಿ ಗಣೇಶ ಚರ್ತುಥಿ ಹಬ್ಬವನ್ನು ಸಾರ್ವಜನಿಕರು ತಮ್ಮ ಮನೆಗಳಲ್ಲಿ ಮಾತ್ರವೇ ಆಚರಿಸಬೇಕೇ ಹೊರತು ಸಾರ್ವಜನಿಕವಾಗಿ ಆಚರಿಸುವಂತಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣಪತಿ ದೇವಸ್ಥಾನಗಳಲ್ಲಿ ಗಣೇಶ ಪೂಜೆ ನಡೆಸಲು ಯಾವುದೇ ಅಭ್ಯಂತರ ಇಲ್ಲ. ಆದರೆ ಉತ್ಸವ, ಮೆರವಣಿಗೆ, ಮೈಕ್ ಆಳವಡಿಕೆ, ಕಾರ್ಯಕ್ರಮ ಆಯೋಜನೆ, ಜನ ರನ್ನು ಸೇರಿಸಲು ಅವಕಾಶ ನೀಡುವುದಿಲ್ಲ. ಸರಕಾರದ ಆದೇಶವನ್ನು ಜಿಲ್ಲೆಯ ಎಲ್ಲರು ಪಾಲನೆ ಮಾಬೇಕು ಎಂದು ಮನವಿ ಮಾಡಿದರು.

ಸಾರ್ವಜನಿಕವಾಗಿ ಗಣೇಶ ವಿಸರ್ಜನೆಗೆ ಜಿಲ್ಲೆಯಲ್ಲಿ ಅವಕಾಶ ಇಲ್ಲ. ತಮ್ಮ ಮನೆಗಳ ಗಣೇಶ ಮೂರ್ತಿಯನ್ನು ತಮ್ಮ ತಮ್ಮ ಮನೆಗಳ ಬಾವಿ ಗಳಿಗೆ ವಿರ್ಸಜನೆ ಮಾಡಬೇಕು. ಸರಕಾರ, ಸ್ಥಳೀಯಾಡಳಿತ ಸಂಸ್ಥೆ ಅಥವಾ ಗ್ರಾಪಂಗಳಿಂದ ಗಣೇಶ ವಿಸರ್ಜನೆಗೆ ಯಾವುದೇ ವ್ಯವಸ್ಥೆ ನೀಡುವುದಿಲ್ಲ. ಈ ವಿಚಾರದಲ್ಲಿ ಕೊರೋನ ವಾರಿಯರ್ಸ್‌ಗಳು ಪರಿಶೀಲನೆ ನಡೆಸಿ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News