ಪುತ್ತೂರು, ಕಡಬ ತಾಲೂಕಿನಲ್ಲಿ 27 ಮಂದಿಗೆ ಕೊರೋನ ಪಾಸಿಟಿವ್ ದೃಢ

Update: 2020-08-16 07:46 GMT

ಪುತ್ತೂರು : ಕಡಬ ಮತ್ತು ಪುತ್ತೂರು ತಾಲೂಕಿನಲ್ಲಿ ರವಿವಾರ ಒಟ್ಟು 27 ಕೊರೋನ ಪಾಸಿಟಿವ್ ಪ್ರಕರಣ ವರದಿಯಾಗಿದೆ.

ಪುತ್ತೂರು ತಾಲೂಕಿನ ನಗರಸಭಾ ವ್ಯಾಪ್ತಿಯ ಪಾಂಗಳಾಯಿ ನಿವಾಸಿ 44 ವರ್ಷದ ಪುರುಷ, ಪಡೀಲು ನಿವಾಸಿ 60 ವರ್ಷದ ಮಹಿಳೆ, ಸೂತ್ರಬೆಟ್ಟು ನಿವಾಸಿ 40 ವರ್ಷದ ಪುರುಷ, 50 ವರ್ಷದ ಮಹಿಳೆ,  ಬೀರಮಲೆ ನಿವಾಸಿ 44 ವರ್ಷದ ಪುರುಷ, ಬನ್ನೂರು ನಿವಾಸಿ 28 ವರ್ಷದ ಮಹಿಳೆ ಮತ್ತು 29 ವರ್ಷದ ಪುರುಷ, ಕೋರ್ಟು ರಸ್ತೆ ನಿವಾಸಿ 57 ವರ್ಷದ ಮಹಿಳೆ, ಮರೀಲು ನಿವಾಸಿ 24 ವರ್ಷದ ಮಹಿಳೆ, 38 ವರ್ಷದ ಮಹಿಳೆ,  ಚಿಕ್ಕಮುಡ್ನೂರು ನಿವಾಸಿ 24 ವರ್ಷದ ಪುರುಷ, ಬೊಳುವಾರು ನಿವಾಸಿ 53 ವರ್ಷದ ಮಹಿಳೆಯರಲ್ಲಿ ಕೊರೋನ ಪಾಸಿಟಿವ್ ದೃಢಪಟ್ಟಿದೆ.

ಗ್ರಾಮೀಣ ಪ್ರದೇಶದ ಉಪ್ಪಿನಂಗಡಿ ನಿವಾಸಿ 93 ವರ್ಷದ ಪುರುಷ, ಕಬಕ ನಿವಾಸಿ 45 ವರ್ಷದ ಮತ್ತು 68 ವರ್ಷದ ಮಹಿಳೆಯರು, ಆರ್ಯಾಪು ನಿವಾಸಿ 59 ವರ್ಷದ ಪುರುಷ, 35 ವರ್ಷದ ಪುರುಷ, 50 ವರ್ಷದ ಮಹಿಳೆ, 29 ವರ್ಷದ ಮಹಿಳೆ, 78 ವರ್ಷದ ಪುರುಷ, ಮಾಡ್ನೂರು ನಿವಾಸಿ 48 ವರ್ಷದ ಮಹಿಳೆಯರಲ್ಲಿ ಕೊರೋನ ಪಾಸಿಟಿವ್ ದೃಢಪಟ್ಟಿದೆ.

ಕಡಬ ತಾಲೂಕಿನ ಕಡಬ ನಿವಾಸಿ 20 ವರ್ಷದ ಪುರುಷ, 11 ವರ್ಷದ ಬಾಲಕಿ, 25 ವರ್ಷದ ಮಹಿಳೆ,  ಕೊಯ್ಲ ನಿವಾಸಿ 57 ವರ್ಷದ ಮಹಿಳೆ,
ಕೊಣಾಲು ನಿವಾಸಿಗಳಾದ  20 ಮತ್ತು 25 ವರ್ಷದ ಮಹಿಳೆಯರಲ್ಲಿ ಕೊರೊನಾ ದೃಢಪಟ್ಟಿದೆ.

ತಾಲೂಕು ಆರೋಗ್ಯ ಅಧಿಕಾರಿಗೆ ಕೊರೋನ

ಪುತ್ತೂರು ತಾಲೂಕು ಆರೋಗ್ಯ ಅಧಿಕಾರಿಗಳಿಗೆ ಮತ್ತು ಆರೋಗ್ಯ ಇಲಾಖೆಯ ವಾಹನ ಚಾಲಕನಿಗೆ ಕೊರೋನ ಪಾಸಿಟಿವ್ ದೃಢಪಟ್ಟಿದ್ದು ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಗ್ಯ ಇಲಾಖೆಯ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News