ಕೋವಿಡ್-19 : ಕಾಸರಗೋಡು-ದ.ಕ.ಜಿಲ್ಲೆ ಗಡಿ ಸಂಚಾರ ಮುಕ್ತ

Update: 2020-08-16 15:39 GMT

ಮಂಗಳೂರು, ಆ.16: ಅಂತರಾಜ್ಯ ಗಡಿಭಾಗವಾದ ಕಾಸರಗೋಡು- ದಕ್ಷಿಣ ಕನ್ನಡ ಜಿಲ್ಲೆಗಳ ನಡುವೆ ಜನ-ವಾಹನ ಸಂಚಾರ ಮುಕ್ತಗೊಳಿಸಿ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಆದೇಶ ಹೊರಡಿಸಿದ್ದಾರೆ.

ದೈನಂದಿನ ಚಟುವಟಿಕೆಗಳಿಗೆ ಸಂಚರಿಸುವ ಸಾರ್ವಜನಿಕರು ಸ್ಥಳೀಯ ಗ್ರಾಪಂ/ ಪುರಸಭೆ/ ಪಟ್ಟಣ ಪಂಚಾಯತ್‌ನಿಂದ ಮಾಸಿಕ ಪಾಸ್ ಪಡೆಯಬೇಕು. ಬಳಿಕ ಚೆಕ್‌ಪೋಸ್ಟ್‌ಗಳಲ್ಲಿ ಒಳಬರುವ/ ಹೊರಹೋಗುವ ಸಂದರ್ಭ ತಮ್ಮ ಮಾಹಿತಿ ದಾಖಲಿಸಬೇಕು.

ಚೆಕ್‌ಪೋಸ್ಟ್‌ನಲ್ಲಿ ಪ್ರತಿದಿನ ವೈದ್ಯಕೀಯ ಸ್ಕ್ರೀನಿಂಗ್ ಹಾಗೂ ಕಾಲಕಾಲಕ್ಕೆ ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕು. ಕೇರಳದಿಂದ ದ.ಕ. ಜಿಲ್ಲೆಯಲ್ಲಿ ಉಳಿದುಕೊಳ್ಳಲು ಇಚ್ಛಿಸುವವರು ಕಡ್ಡಾಯವಾಗಿ ‘ಸೇವಾ ಸಿಂಧು ವೆಬ್ ಪೋರ್ಟಲ್’ನಲ್ಲಿ ಪಾಸ್ ಪಡೆದು ತಲಪಾಡಿ/ ಜಾಲ್ಸೂರು ಚೆಕ್‌ಪೋಸ್ಟ್ ಮುಖಾಂತರ ಸಂಚರಿಸಬಹುದಾಗಿದೆ. ಕರ್ನಾಟಕ ರಾಜ್ಯ ಸರಕಾರದ ಕೋವಿಡ್-19ರ ಕ್ವಾರಂಟೈನ್ ಮಾರ್ಗಸೂಚಿಗಳಿಗೆ ಬದ್ಧರಾಗಿರಬೇಕು ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News