ಯೆನೆಪೊಯ ಕಾಲೇಜಿನಲ್ಲಿ ಪದ್ಮಶ್ರೀ ಪುರಸ್ಕತ ಹಾಜಬ್ಬರಿಂದ ಉಪನ್ಯಾಸ

Update: 2020-08-16 16:19 GMT

ಮಂಗಳೂರು, ಆ.16: ಯೆನೆಪೊಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಒಳಪಟ್ಟಂತಹ ಬಲ್ಮಠದ ಯೆನೆಪೊಯ ಆರ್ಟ್, ಸೈನ್ಸ್, ಕಾಮರ್ಸ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜಿನಲ್ಲಿ ಪದ್ಮಶ್ರೀ ಪುರಸ್ಕತ ಹರೇಕಳ ಹಾಜಬ್ಬ ಅವರಿಂದ ಆನ್‌ಲೈನ್ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಹರೇಕಳ ಹಾಜಬ್ಬ, ಬಡತನದಲ್ಲಿ ಬೆಳೆದು ಬಂದಂತಹ ತನಗೆ ಪದ್ಮಶ್ರೀ ಪುರಸ್ಕಾರ ದೊರೆತದ್ದು ನಿಜಕ್ಕೂ ಅನಿರೀಕ್ಷಿತ. ಯೆನೆಪೊಯ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಲು ಅವಕಾಶ ಸಿಕ್ಕಿದ್ದು ಸಂತೋಷವಾಗಿದೆ ಎಂದರು.
ಕಾಲೇಜಿನ ಉಪಪ್ರಾಂಶುಪಾಲ ಡಾ.ಶರೀನ್ ಮಾತನಾಡಿ, ಹಾಜಬ್ಬರವರ ಸಮಾಜಸೇವೆಯನ್ನು ಶ್ಲಾಘಿಸಿದರು ಹಾಗೂ ವಿದ್ಯಾರ್ಥಿಗಳು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಹೇಳಿದರು.

ಕನ್ನಡ ಸಹ ಪ್ರಾಧ್ಯಾಪಕ ನಿಯಾಝ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಉಪಪ್ರಾಂಶುಪಾಲ ಡಾ.ಶರೀನ್ ಅವರು ಹಾಜಬ್ಬರಿಗೆ ಸ್ಮರಣಿಕೆ ನೀಡಿದರು. ವಿದ್ಯಾರ್ಥಿ ಶಿಹಾನ್ ಪ್ರಾರ್ಥಿಸಿದರು. ಪ್ರದೀಪ್ ಎ. ಸ್ವಾಗತಿಸಿದರು. ಅಬ್ದುಲ್ ನಾಸಿರ್ ವಂದಿಸಿದರು. ನಿಶಾನ್ ಶಾಲಿಯಾನ್ ಅತಿಥಿಗಳನ್ನು ಪರಿಚಯಿಸಿದರು. ಶಕೀಬ್ ಇಸ್ಮಾಯೀಲ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News