ಬೆಂಗಳೂರಿನಲ್ಲಿ ಮತ್ತೆ 2,131 ಹೊಸ ಕೊರೋನ ಪ್ರಕರಣ; ಸೋಂಕಿತರ ಸಂಖ್ಯೆ 89,811ಕ್ಕೆ ಏರಿಕೆ

Update: 2020-08-16 16:34 GMT

ಬೆಂಗಳೂರು, ಆ.16: ನಗರದಲ್ಲಿ ಕೊರೋನ ಸೋಂಕಿತರ ಪ್ರಮಾಣ ಮತ್ತಷ್ಟು ಏರಿಕೆಯಾಗಿದ್ದು, ರವಿವಾರ 2,131 ಹೊಸ ಕೊರೋನ ಪ್ರಕರಣಗಳು ದೃಢಪಟ್ಟಿವೆ. ಒಟ್ಟಾರೆ ಸೋಂಕಿತರ ಸಂಖ್ಯೆ 89,811 ಕ್ಕೆ ಏರಿಕೆಯಾಗಿದೆ.

ನಗರದಾದ್ಯಂತ ವಿವಿಧ ಆಸ್ಪತ್ರೆಗಳಿಂದ ರವಿವಾರ 2,359 ಬಿಡುಗಡೆಯಾಗಿದ್ದು, ಒಟ್ಟಾರೆ ಚೇತರಿಸಿಕೊಂಡವರ ಸಂಖ್ಯೆ 53,785ಕ್ಕೆ ಏರಿಕೆಯಾಗಿದೆ ಹಾಗೂ 34,584 ಸಕ್ರಿಯ ಪ್ರಕರಣಗಳಿವೆ. ಕೊರೋನದಿಂದ ಇಂದು 49 ಜನರು ಮೃತಪಟ್ಟಿದ್ದಾರೆ.

ಕಳೆದ 10-11 ದಿನಗಳಲ್ಲಿ ನಗರದಲ್ಲಿ 24,940 ಕೋವಿಡ್ ಸೋಂಕಿತರು ಕಂಡುಬಂದಿದ್ದು, ಪ್ರತಿದಿನವೂ ಎರಡು ಸಾವಿರಕ್ಕಿಂತ ಅಧಿಕ ಸಂಖ್ಯೆಯಲ್ಲಿ ಸೋಂಕು ಪತ್ತೆಯಾಗುತ್ತಿವೆ. ಅಲ್ಲದೆ, ಪ್ರತಿದಿನವೂ ಗುಣಮುಖರಾಗುತ್ತಿರುವ ಸಂಖ್ಯೆಯೂ ಎರಡು ಸಾವಿರಕ್ಕಿಂತ ಅಧಿಕ ಇರುವುದು ಸಮಾಧಾನಕಾರ ಸಂಗತಿಯಾಗಿದೆ.

1444 ಸಾವು: ನಗರದಲ್ಲೀಗ ಕೋವಿಡ್ ಸೋಂಕಿಗೆ ಮೃತಪಡುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ಇಂದು 49 ಜನರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 1444 ಕ್ಕೆ ಏರಿದೆ.

ನಗರದಲ್ಲಿ ಚೇತರಿಕೆ ಪ್ರಮಾಣ ಶೇ.59.89 ರಷ್ಟಿದ್ದರೆ, ಮರಣ ಪ್ರಮಾಣ ಶೇ.1.61 ರಷ್ಟಿದೆ. ಬೆಂಗಳೂರು ನಗರದಾದ್ಯಂತ ಕೊರೋನದಿಂದ ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿರುವುದು ಸಮಾಧಾನಕರ ವಿಷಯವಾಗಿದೆ ಎಂದು ಪಾಲಿಕೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News