ಮಂಗಳೂರು: ಗೂಡಂಗಡಿ ವ್ಯಾಪಾರಿಗಳಿಗೆ 2ನೇ ಹಂತದ ದಿನಬಳಕೆಯ ಸಾಮಗ್ರಿ ವಿತರಣೆ ಕಾರ್ಯಕ್ರಮ

Update: 2020-08-17 16:00 GMT

ಮಂಗಳೂರು, ಆ. 17 : ಸ್ವ ಉದ್ಯೋಗಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಮತ್ತು ಕೆ.ಎಸ್. ಸಯ್ಯದ್ ಹಾಜಿ ಕರ್ನಿರೆ ಚಾರಿಟೇಬಲ್ ಟ್ರಸ್ಟ್ ಇದರ ಸಹಯೋಗದಲ್ಲಿ ಎರಡನೇ ಹಂತದ 40 ಫಲಾನುಭವಿಗಳಾದ ಗೂಡಂಗಡಿ ವ್ಯಾಪಾರಿಗಳಿಗೆ ದಿನಬಳಕೆಯ ಸಾಮಗ್ರಿ ವಿತರಣಾ ಕಾರ್ಯಕ್ರಮ ಟ್ಯಾಲೆಂಟ್ ಕಾನ್ಫರೆನ್ಸ್ ಹಾಲ್, ಕಂಕನಾಡಿಯಲ್ಲಿ ಜರಗಿತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಭಾರತ್ ಕನ್‍ಸ್ಟ್ರಕ್ಷನ್ ಪ್ರೈವೇಟ್ ಲಿಮೀಟೆಡ್ ಆಡಳಿತ ನಿರ್ದೇಶಕರಾದ ಎಸ್.ಎಮ್. ಮುಸ್ತಫ, ವ್ಯಾಪರದಲ್ಲಿ ಪ್ರಮಾಣಿಕತೆ ಇದ್ದಾಗ ಅಲ್ಲಾಹನ ಸಹಾಯ ನಮಗೆ ಇರುತ್ತದೆ ಮತ್ತು ಕಠಿಣ ಪರಿಶ್ರಮದಿಂದ ಜೀವನದಲ್ಲಿ ಮೇಲಕ್ಕೆ ಬರಲು ಸಾಧ್ಯ ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಶೇಖ್ ಮೊಯ್ದಿನ್ ಒಪರೇಶನ್ ಮ್ಯಾನೇಜರ್ ಎಕ್ಸ್ ಪರ್ಟೈಸ್ ಮಂಗಳೂರು ಇವರು ಮಾತನಾಡಿ, ಇವತ್ತು ನೀವು ಈ ಸಾಮಾನನ್ನು ಪಡೆದು ಇದರಿಂದ ಅಭಿವೃದ್ದಿ ಹೊಂದಿ ಮುಂದೆ ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವವರಾಗಬೇಕು ಎಂದು ತಿಳಿಸಿದರು.

ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಅಹ್ಮದ್ ಶರೀಫ್ ಆಡಳಿತ ನಿರ್ದೇಕರು, ಫಾತಿಮಾ ಟ್ರೇಡರ್ಸ್ ಮಂಗಳೂರು, ಮುಹಮ್ಮದ್ ಶವಾಝ್ ಮ್ಯಾನೇಜಿಂಗ್ ಪಾರ್ಟನರ್ ಎಕ್ಸ್ ಪರ್ಟೈಸ್ ಇಂಡಸ್ಟ್ರೀಸ್ ತಲಪಾಡಿ ಮತ್ತು ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‍ನ ಗೌರವ ಸಲಹೆಗಾರರಾದ ಸುಲೈಮಾನ್ ಶೈಖ್ ಬೆಳುವಾಯಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸ್ಥಾಪಕಾಧ್ಯಕ್ಷ ಅಬ್ದುಲ್ ರಾವೂಫ್ ಪುತ್ತಿಗೆ ವಹಿಸಿದರು. ಸಂಸ್ಥೆಯ ಅಧ್ಯಕ್ಷ ರಿಯಾಝ್ ಕಣ್ಣೂರು ಸ್ವಾಗತಿಸಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ನಕಾಶ್ ಬಾಂಬಿಲ ವಂದಿಸಿದರು. ಪ್ರ. ಕಾರ್ಯದರ್ಶಿ ಅಬ್ದುಲ್ ಹಮೀದ್ ಕಣ್ಣೂರು ಕಾರ್ಯಕ್ರಮ ನಿರೂಪಿಸಿದರು.

ಮಜೀದ್ ತುಂಬೆ, ಹಕೀಮ್ ಬಜಾಲ್, ಬಶೀರ್ ಸುರಿಬೈಲ್ ಸಹಕರಿಸಿದರು. ಕೋವಿಡ್ 19 ನಿಯಮಾವಳಿಗಳನ್ನು ಪಾಲಿಸಿ ಕಾರ್ಯಕ್ರಮ ನಡೆಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News