ವೇತನ ಬಿಡುಗಡೆಗೆ ಆಗ್ರಹಿಸಿ ಬಿಸಿಯೂಟ ನೌಕರರ ಧರಣಿ

Update: 2020-08-17 17:57 GMT

ಬೆಂಗಳೂರು, ಆ.17: ಬಿಸಿಯೂಟದ ನೌಕರರ ವೇತನ ಬಿಡುಗಡೆ ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಅಕ್ಷರದಾಸೋಹ ನೌಕರರ ಸಂಘದ ರಾಜ್ಯಸಮಿತಿಯ ಕಾರ್ಯಕರ್ತರ ವತಿಯಿಂದ ಸೋಮವಾರ ಪ್ರತಿಭಟನೆ ನಡೆಯಿತು.

ಸಚಿವ ಸುರೇಶ್ ಕುಮಾರ್ ಅವರ ನಿವಾಸದ ಮುಂದೆ ಪ್ರತಿಭಟನೆ ನಡೆಸಲು ಮುಂದಾದದ ಪ್ರತಿಭಟನಾಕಾರರನ್ನ ಪೊಲಿಸರು ವಶಕ್ಕೆ ಪಡೆದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಅಕ್ಷರದಾಸೋಹ ನೌಕರರ ಸಂಘದ ಗೌರವಾಧ್ಯಕ್ಷೆ ಎಸ್.ವರಲಕ್ಷ್ಮಿ, ರಾಜ್ಯದಲ್ಲಿ ಸುಮಾರು ಒಂದು ಲಕ್ಷದ ಹದಿನೇಳು ಸಾವಿರ ಬಿಸಿಯೂಟದ ನೌಕರರಿದ್ದಾರೆ. ಅವರಿಗೆಲ್ಲ ಏಪ್ರಿಲ್ ತಿಂಗಳಿಂದ ವೇತನ ನೀಡಿಲ್ಲ. ಹೀಗಾಗಿ ಬಿಸಿಯೂಟ ನೌಕರರು ಕಷ್ಟದಲ್ಲ್ಲಿ ಬದುಕು ಕಳೆಯುತ್ತಿದ್ದಾರೆ ಎಂದು ದೂರಿದರು.

ಸುಮಾರು 1,20 ಕೋಟಿ ರೂ.ಅನ್ನು ಸರಕಾರ ಬಿಡುಗಡೆ ಮಾಡಬೇಕಾಗಿತ್ತು. ಆದರೆ ಇದುವರೆಗೂ ಬಿಡುಗಡೆ ಮಾಡಿಲ್ಲ. ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮನವಿಸಲ್ಲಿಸಲಾಗಿದೆ. ಆದರೂ ನಮ್ಮ ಸಮಸ್ಯೆ ಆಲಿಸುತ್ತಿಲ್ಲ ಎಂದರು.

ವೇತನ ಪಾವತಿ ಮಾಡದೇ ಇದ್ದರೆ ಸಂಘದ ವತಿಯಿಂದ ರಾಜ್ಯದ ಎಲ್ಕ ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯ್ತಿಗಳ ಎದುರು ಸರಣಿ ಉಪವಾಸ ಸತ್ಯಾಗ್ರಹವನ್ನು ನಡೆಸಲಾಗುದು ಎಂದು ಎಚ್ಚರಿಸಿದರು.

ಸಂಘದ ಅಧ್ಯಕ್ಷೆ ಲಕ್ಷ್ಮೀದೇವಿ  ಮಾತನಾಡಿ, ಬಿಸಿಯೂಟದ ನೌಕರರಿಗೆ ಕನಿಷ್ಠ ಆರು ತಿಂಗಳ ವರೆಗೆ ಪಡಿತರ ಒದಗಿಸಬೇಕು. ಲಾಕ್ ಡೌನ್ ಅವಧಿಯಲ್ಲಿ 7,500 ರೂ.ನಂತೆ ಮುಂದಿನ ಆರು ತಿಂಗಳು ಗೌರವಧನ ಪಾವತಿಸಬೇಕು.ಕೋವಿಡ್ ಭಾಗವಾಗಿ ಕ್ವಾರಂಟೈನ್ ನಲ್ಲಿ ಇದ್ದವರಿಗೆ ಅಡುಗೆ ಮಾಡುತ್ತಿದ್ದ ನೌಕ ವೇತನ ಪಾವತಿಸಬೇಕು ಎಂದರು.

ಬಿಸಿಯೂಟದ ನೌಕರರಿಗೆ ಯಾವುದೇ ರೀತಿಯ ಸವಲತ್ತುಗಳು ಇಲ್ಲ. ಸರ್ಕಾರ ಎಲ್ ಐಸಿ ಆಧಾರಿತ ಪೆನ್ಷನ್ ಜಾರಿಗೆ ತರಬೇಕು.ನೌಕರರನ್ನು ಖಾಯಂ ಮಾಡಿ ಶಾಸನಾತ್ಮಕ ಸವಲತ್ತುಗಳನ್ನು ನೀಡಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News