ಸಂಹಿತಾಗೆ ‘ಕೆಳದಿ ಚೆನ್ನಮ್ಮ ಅಸಾಧಾರಣ ಬಾಲಪ್ರತಿಭೆ’ ಪ್ರಶಸ್ತಿ

Update: 2020-08-18 15:06 GMT

ಉಡುಪಿ, ಆ.18: ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಜಿಲ್ಲಾ ಮಟ್ಟದಲ್ಲಿ ಕೊಡಮಾಡುವ ಮಕ್ಕಳ ಅಸಾಧಾರಣ ಸಾಧನೆಗಾಗಿ 2019-20ನೇ ಸಾಲಿನ ಕೆಳದಿ ಚೆನ್ನಮ್ಮ ಅಸಾಧಾರಣ ಬಾಲಪ್ರತಿಭೆ ಉಡುಪಿ ಜಿಲ್ಲಾ ಪ್ರಶಸ್ತಿಯನ್ನು ಪರ್ಕಳದ ಬಹುಮುಖ ಪ್ರತಿಭೆ ಸಂಹಿತಾ ಜಿ.ಪಿ. ಅವರಿಗೆ ನೀಡಿದೆ.

10 ಸಾವಿರ ನಗದಿನೊಂದಿಗೆ ಪ್ರಶಸ್ತಿ ಪತ್ರ ಕಳುಹಿಸಿಕೊಟ್ಟಿರುವ ಜಿಲ್ಲಾಡಳಿತ ಕರೋನಾ ಕಾರಣದಿಂದ ಸಾರ್ವಜನಿಕ ಸಮಾರಂಭ ಏರ್ಪಡಿಸಿ ರಲಿಲ್ಲ. ಸಂಹಿತಾ ಮಣಿಪಾಲ ಮಾಧವಕೃಪಾ ಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ಓದುತ್ತಿದ್ದು ಝೀ-ಕನ್ನಡದ ‘ಕನ್ನಡ ಕಣ್ಮಣಿ’ ಶೋ ವಿಜೇತೆಯಾಗಿದ್ದಾಳೆ. ನಾಟಕ, ಭಾಷಣ, ಸಂಗೀತ, ಚಿತ್ರಕಲೆ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಂಹಿತಾ, ಈಕೆ ಅದಮಾರು ಪೂರ್ಣಪ್ರಜ್ಞ ಕಾಲೇಜಿ ನಲ್ಲಿ ಶಿಕ್ಷಕರಾಗಿರುವ ಪ್ರಭಾಕರ ಜಿ.ಪಿ. ಮತ್ತು ಮಣಿಪಾಲ ವಿವಿ ಉದ್ಯೋಗಿ ಕಲ್ಪನಾ ದಂಪತಿ ಪುತ್ರಿ ಎಂದು ಪ್ರಕಟಣೆ ತಿಳಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News