ಬಲೆಯಲ್ಲಿ ಸಿಲುಕಿದ ಹೆಬ್ಬಾವಿನ ರಕ್ಷಣೆ

Update: 2020-08-18 15:41 GMT

ಕುಂದಾಪುರ, ಆ.18: ಜಪ್ತಿ ಸಮೀಪ ಇಂದು ಬೆಳಗ್ಗೆ ಪ್ರಾಣಿಗಳಿಗೆ ಹಾಕಿದ್ದ ಬಲೆಯಲ್ಲಿ ಸಿಲುಕಿದ ಬೃಹತ್ ಗಾತ್ರದ ಹೆಬ್ಬಾವನ್ನು ಕುಂದಾಪುರ ವಲಯ ಅರಣ್ಯ ಕಚೇರಿಯ ಅಧಿಕಾರಿಗು ಹಾಗೂ ಸಿಬ್ಬಂದಿಗಳು ರಕ್ಷಿಸಿದ್ದಾರೆ.

ಸುಮಾರು 9 ಅಡಿ ಉದ್ದದ ಈ ಬೃಹತ್ ಹೆಬ್ಬಾವು ಬಲೆಯಲ್ಲಿ ಸಿಲುಕಿ ನರಳಾಡುತ್ತಿತ್ತು. ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು, ಹೆಬ್ಬಾವನ್ನು ಬಲೆಯಿಂದ ರಕ್ಷಿಸಿ, ನೇರಳೆಕಟ್ಟೆ ಅರಣ್ಯದಲ್ಲಿ ಬಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News