ಪುತ್ತೂರು, ಕಡಬ ತಾಲೂಕುಗಳಲ್ಲಿ ಮತ್ತೆ 17 ಕೊರೋನ ಪಾಸಿಟಿವ್ ಪತ್ತೆ

Update: 2020-08-19 07:18 GMT

ಪುತ್ತೂರು, ಆ.19: ಕಡಬ ಮತ್ತು ಪುತ್ತೂರು ತಾಲೂಕುಗಳಲ್ಲಿ ಬುಧವಾರ ಮತ್ತೆ 17 ಕೊರೋನ ಪ್ರಕರಣಗಳು ದೃಢಪಟ್ಟಿವೆ.

ಪುತ್ತೂರು ತಾಲೂಕಿನ ನಗರಸಭಾ ವ್ಯಾಪ್ತಿಯ ಭವಾನಿ ಶಂಕರ್ ದೇವಾಲಯ ರಸ್ತೆ ನಿವಾಸಿ 29 ವರ್ಷದ ಪುರುಷ, ಮಲ್ಯ ಕಂಪೌಂಡ್ ನಿವಾಸಿ 77 ವರ್ಷದ ಮಹಿಳೆ, ಪಡೀಲ್ ನಿವಾಸಿ 33 ವರ್ಷದ ಪುರುಷ, ದರ್ಬೆ ನಿವಾಸಿ 34 ವರ್ಷದ ಪುರುಷ, ಸಾಲ್ಮರ ನಿವಾಸಿ 35 ವರ್ಷದ ಪುರುಷದ ಪುರುಷ, ಗ್ರಾಮೀಣ ಪ್ರದೇಶವಾದ ಬೀದಿಮಜಲು ನಿವಾಸಿ 35 ವರ್ಷದ ಮಹಿಳೆ, ಕುರಿಯ ನಿವಾಸಿ 42 ವರ್ಷದ ಪುರುಷ, 37 ವರ್ಷದ ಪುರುಷ, 49 ವರ್ಷದ ಪುರುಷ, 10 ವರ್ಷದ ಬಾಲಕ, 34 ವರ್ಷದ ಪುರುಷ, 38 ವರ್ಷದ ಪುರುಷ, ಮಾಡ್ನೂರು ನಿವಾಸಿ 40 ವರ್ಷದ ಮಹಿಳೆ ಮತ್ತು 15 ವರ್ಷದ ಬಾಲಕನಲ್ಲಿ ಕೊರೋನ ಸೋಂಕು ದೃಢಪಟ್ಟಿದೆ.

ಕಡಬ ತಾಲೂಕಿನ ನೂಜಿ ಬಾಳ್ತಿಲ ನಿವಾಸಿ 70 ವರ್ಷದ ಪುರುಷ, ಕಡಬ ನಿವಾಸಿಗಳಾದ 12 ವರ್ಷದ ಬಾಲಕಿ ಮತ್ತು 40 ವರ್ಷದ ಪುರುಷನಲ್ಲಿ ಕೊರೋನ ದೃಢಪಟ್ಟಿದೆ.

ಇದರೊಂದಿಗೆ ಉಭಯ ತಾಲೂಕುಗಳಲ್ಲಿ ಈ ತನಕ ಸೋಂಕು ದೃಢಪಟ್ಟ ಒಟ್ಟು ಪ್ರಕರಣಗಳ ಸಂಖ್ಯೆ 529ಕ್ಕೆ ಏರಿಕೆಯಾಗಿದೆ. ಏಳು ಮಂದಿ ಸಾವನ್ನಪ್ಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News