ಭಟ್ಕಳದ ಫಾತಿಮಾ ಶಿಂಗೇರಿ ಡಾಕ್ಟರ್ ಆಫ್ ಮೆಡಿಸಿನ್ ನಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆ

Update: 2020-08-22 15:15 GMT

ಭಟ್ಕಳ : ವೈದ್ಯಕೀಯ ಸಿಇಟಿ ಯಲ್ಲಿ ಉನ್ನತ ರ್ಯಾಂಕ್ ಪಡೆದು ನಂತರ ವೈದ್ಯಕೀಯ ಸೀಟು ಪಡೆದಿದ್ದ ಭಟ್ಕಳದ ನೂರುಲ್ ಮುಬೀನ್ ಶಿಂಗೇರಿ ಹಾಗೂ ಸಯೀದಾ ಫಿರ್ದೊಸ್ ದಂಪತಿ ಪುತ್ರಿ ಫಾತಿಮಾ ತಹ್ಮಿ ಶಿಂಗೇರಿ ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವ ವಿದ್ಯಾಲಯದಿಂದ ಡಾಕ್ಟರ್ ಆಫ್ ಮೆಡಿಸಿನ್ ಪಡೆದು ಭಟ್ಕಳಕ್ಕೆ ಕೀರ್ತಿ ತಂದಿದ್ದಾರೆ.

ಮಂಗಳೂರಿನ ಎಜೆ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ನಲ್ಲಿ ಅಧ್ಯಯನ  ಮಾಡುತ್ತ,  ಜೂನ್-ಜುಲೈ 2020 ರಲ್ಲಿ ಎಂಡಿ ಪರೀಕ್ಷೆಗೆ ಹಾಜರಾಗಿದ್ದರು.  ಇದರಲ್ಲಿ ಅವರು ಪೀಡಿಯಾಟ್ರಿಕ್ಸ್ (ಪೀಡಿಯಾ ಟ್ರಕ್) ನಲ್ಲಿ 700 ರಲ್ಲಿ 432 ಅಂಕಗಳನ್ನು ಗಳಿಸಿ 61.7% ರಷ್ಟು ಗಮನಾರ್ಹ ಯಶಸ್ಸನ್ನು ಗಳಿಸಿದ್ದಾರೆ.

ಓಮನ್ನ  ಇಂಡಿಯನ್ ಸ್ಕೂಲ್ ಆಫ್ ಅಬ್ರಾದಿಂದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ವ್ಯಾಸಂಗ ಮಾಡಿದ ಫಾತಿಮಾ ತಹ್ಮಿ ಎಸೆಸೆಲ್ಸಿ 88% ಅಂಕಗಳೊಂದಿಗೆ ತೇರ್ಗಡೆ ಹೊಂದಿ, ನಂತರ ಪಿಯುಸಿಯಲ್ಲಿ ಮಂಗಳೂರಿನ ಸೇಂಟ್ ಅಗ್ನಿಸ್ ಕಾಲೇಜು 80% ಅಂಕಗಳೊಂದಿಗೆ ಉತ್ತೀರ್ಣರಾದರು.  ಸಿಇಟಿಯಲ್ಲಿ, ಅವರು ಉತ್ತಮ ರ‍್ಯಾಂಕ್ ಗಳಿಸಿದ ಇವರು 1000 ಶ್ರೇಯಾಂಕಗಳಲ್ಲಿ ಉಚಿತ ವೈದ್ಯಕೀಯ ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾದರು.

2015 ರಲ್ಲಿ ಡಾ. ಫಾತಿಮಾ ತಹ್ಮಿ ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಗೆ ಸೇರಿಕೊಂಡರು, ಅಲ್ಲಿ ಅವರು 68% ಅಂಕಗಳೊಂದಿಗೆ ಪ್ರಥಮ ದರ್ಜೆಯಲ್ಲಿ ಯಶಸ್ವಿಯಾದರು. ನಂತರ ವೆನ್ಲಾಕ್ ಆಸ್ಪತ್ರೆಯಲ್ಲಿ ಇಂಟರ್ನ್ಶಿಪ್ ಕೋರ್ಸ್ ಮುಗಿಸಿದ ನಂತರ ಎಂಡಿಗೆ ಸೇರಿದರು.

ಜನರ ಸೇವೆಯಲ್ಲಿ ತಮ್ಮನ್ನು ಅರ್ಪಿಸುವುದಾಗಿ ಡಾ. ಫಾತಿಮಾ ಶಿಂಗೇರಿ ಹೇಳಿಕೊಂಡಿದ್ದಾರೆ. ತನ್ನ  ಯಶಸ್ಸಿಗೆ ಇಲ್ಲಿನ ವಿವಿಧ ಸಂಘ-ಸಂಸ್ಥೆಗಳು ಮತ್ತು ಶಿಕ್ಷಣ ಸಂಸ್ಥೆಯ ಮುಖಂಡರು, ಗಣ್ಯರು ಕಾರಣವಾಗಿದ್ದು, ಅವರನ್ನು ಡಾ. ಫಾತಿಮಾ ಅಭಿನಂಧಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News