ಗುರುಪುರ ಕೈಕಂಬ: ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷರಾಗಿ ಮೇಗಾ ಅಬ್ದುಲ್ ಅಝೀಝ್ ಆಯ್ಕೆ

Update: 2020-08-23 16:21 GMT

ಗುರುಪುರ ಕೈಕಂಬ: ಹಲವಾರು ವರ್ಷಗಳಿಂದ ಸಾಮಾಜಿಕ ಕಾರ್ಯಚಟುವಟಿಕೆ ನಡೆಸುತ್ತಿರುವ ಫ್ರೆಂಡ್ಸ್ ಸರ್ಕಲ್ ಗುರುಪುರ ಕೈಕಂಬ ಇದರ ವಾರ್ಷಿಕ ಮಹಾ ಸಭೆಯು ಮೇಗಾ ಪ್ಲಾಝ ಹಾಲ್‌ನಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಮೇಗಾ ಅಬ್ದುಲ್ ಅಝೀಝ್ ಅವರನ್ನು ಆಯ್ಕೆ ಮಾಡಲಾಯಿತು.

ಗೌರವಾಧ್ಯಕ್ಷರಾಗಿ ಇಂತಿಯಾಝ್ ನಸ್‌ನಸ್ ಗುರುಪುರ, ಉಪಾಧ್ಯಕ್ಷರಾಗಿ ಮುಹಮ್ಮದ್ ಶಮೀರ್, ಪ್ರಧಾನ ಕಾರ್ಯದರ್ಶಿಯಾಗಿ ತನ್‌ವೀರ್ ಗುರುಪುರ, ಜೊತೆಕಾರ್ಯದರ್ಶಿಯಾಗಿ ಶಿಫಾಝ್ ಕೈಕಂಬ, ಕೋಶಾಧಿಕಾರಿಯಾಗಿ ಅಬ್ದುರ್ರಹ್‌ಮಾನ್ (ಅದ್ದು) ಹಾದಿಯಾ ಕೈಕಂಬ  ಹಾಗೂ ಕಾರ್ಯಕಾರಿ ಸದಸ್ಯರನ್ನು ನೇಮಕ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News