ಇಕ್ರಾ ಚಾರಿಟೇಬಲ್ ಟ್ರಸ್ಟ್ ಹಳೆಕೋಟೆ : ಆಯುಷ್ಮಾನ್ ಕಾರ್ಡ್ ನೊಂದಣಿ, ವಿತರಣಾ ಕಾರ್ಯಕ್ರಮ

Update: 2020-08-24 10:38 GMT

ಉಳ್ಳಾಲ: ಇಕ್ರಾ ಚಾರಿಟೇಬಲ್ ಟ್ರಸ್ಟ್ ಹಳೆಕೋಟೆ, ಉಳ್ಳಾಲ ವತಿಯಿಂದ ಆಯುಷ್ಮಾನ್ ಕಾರ್ಡ್ ನೊಂದಣಿ ಮತ್ತು ವಿತರಣಾ ಕಾರ್ಯಕ್ರಮ ಹಳೆಕೋಟೆ ಇಲ್ಫಾ ಮಂಝಿಲ್ ವಠಾರದಲ್ಲಿ ನಡೆಯಿತು.

ಹಳೆಕೋಟೆ ಎಸ್.ಡಿ.ಪಿ.ಐ ಅಧ್ಯಕ್ಷ ಅಬ್ದುಲ್ ರವೂಫ್ ಆಯುಷ್ಮಾನ್ ಕಾರ್ಡ್ ನೊಂದಣಿ ಮಾಡುವ ಮೂಲಕ ಚಾಲನೆ ನೀಡಿದರು.

ಇಕ್ರಾ ಚಾರಿಟೇಬಲ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಫಾರೂಕ್ ಮಾತನಾಡಿ ಇತ್ತೀಚಿನ ಸಂದಿಗ್ಧ ಪರಿಸ್ಥಿತಿಯನ್ನು ಮನಗಂಡು ಆಯುಷ್ಮಾನ್ ಕಾರ್ಡ್ ನೊಂದಣಿ ಮತ್ತು ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ, 437 ಮಂದಿ ಫಲಾನುಭವಿಗಳು ಇದರ ಪ್ರಯೋಜನವನ್ನು ಪಡೆದಿದ್ದಾರೆ, ಬಡ ಮಕ್ಕಳಿಗೆ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡುವ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವುದು ನಮ್ಮ ಮುಂದಿನ ಯೋಜನೆಯಾಗಿದೆ ಎಂದರು.

ಅಹಿಂದ ಸಂಪಾದಕ ಅಕ್ರಂ ಹಸನ್ ಮಾತನಾಡಿ ಸರ್ಕಾರದ ಯೋಜನೆಗಳು ಮದ್ಯಮ ಮತ್ತು ವಿದ್ಯಾವಂತ  ವರ್ಗಕ್ಕೆ ತಲುಪುತ್ತದೆ ಆದರೆ ತೀರಾ ಶಿಕ್ಷಣವಿಲ್ಲದ ಮತ್ತು ಬಡವರ್ಗಕ್ಕೆ ತಲುಪುತ್ತಿಲ್ಲ ಈ ನಿಟ್ಟಿನಲ್ಲಿ ಇಕ್ರಾ ಚಾರಿಟೇಬಲ್ ಟ್ರಸ್ಟ್ ಹಮ್ಮಿಕೊಂಡಿರು ಕಾರ್ಯ ಶ್ಲಾಘನೀಯ ಎಂದರು.

ಎಸ್.ಡಿ.ಪಿ.ಐ ಮುಖಂಡ ಝಾಕೀರ್ ಹುಸೈನ್ ಮಾತನಾಡಿ ಇಕ್ರಾ ಚಾರಿಟೇಬಲ್ ಟ್ರಸ್ಟ್ ಅವರು ಜನಸಾಮಾನ್ಯರ ಆರೋಗ್ಯದ ಕಾಳಜಿಯಿಂದ ಆಯುಷ್ಮಾನ್ ಕಾರ್ಡ್ ನೊಂದಣಿ ಮತ್ತು ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಆಯುಷ್ಮಾನ್ ಕಾರ್ಡಿನ ಬಗ್ಗೆ ಜನಸಾಮಾನ್ಯರಿಗೆ ಅರಿವಿನ ಕೊರತೆಯಿದೆ ಇದ ರಿಂದ ಎ.ಪಿ.ಎಲ್ ಕಾರ್ಡುದಾರರಿಗೆ ಶೇಕಡಾ 30 ರಿಯಾಯಿತಿ ಮತ್ತು ಬಿ.ಪಿ.ಎಲ್ ಕಾರ್ಡುದಾರರಿಗೆ ಸಂಪೂರ್ಣ ಉಚಿತ ಚಿಕಿತ್ಸೆಎಂದರು.

ಸಮಾಜ ಸೇವಕ ಶರೀಫ್ ಎಮ್.ಎಚ್, ಕರೀಂ ಹಳೆಕೋಟೆ, ಸಂಸ್ಥೆಯ ಪದಾಧಿಕಾರಿಗಳಾದ ಅನ್ಸಾರ್, ಇರ್ಫಾನ್, ಶಿಯಾಬ್, ಇಜಾಝ್, ಬಾಸೀತ್, ಸಫಾಫ್, ಆಶೀಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News