ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ಆರೋಪ: ಹಲವರ ಬಂಧನ

Update: 2020-08-24 16:45 GMT

ಬೆಂಗಳೂರು, ಆ.24: ಕೆಜಿಎಫ್ ಸಿನಿಮಾ ಮಾದರಿಯಂತೆ ಬೈಕ್‍ವೊಂದನ್ನು ವಿನ್ಯಾಸಗೊಳಿಸಿ, ಹೆದ್ದಾರಿ ರಸ್ತೆಯಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಆರೋಪದಡಿ ಹಲವರನ್ನು ಇಲ್ಲಿನ ಕೆಆರ್ ಪುರಂ ಸಂಚಾರಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ನಗರದ ಹೊಸಕೋಟೆಯ ಸುನಿಲ್, ಮಧು, ಮುಬಾರಕ್, ಕಾರ್ತಿಕ್, ನವಾಝ್ ಎಂಬುವರು ಬಂಧಿತ ಆರೋಪಿಗಳಾಗಿದ್ದು, ಈ ಪೈಕಿ ಸುನಿಲ್ ಎಂಬಾತ ಯಶ್ ಅಭಿಮಾನಿ ಸಂಘದ ಕಾರ್ಯದರ್ಶಿ ಎನ್ನಲಾಗಿದೆ.

ಕೆಜಿಎಫ್ ಸಿನಿಮಾ ಮಾದರಿಯಂತೆ ಬೈಕ್ ವಿನ್ಯಾಸಗೊಳಿಸಿಕೊಂಡು ವ್ಹೀಲಿಂಗ್ ಮಾಡಿದ್ದ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಗಳು ಹಂಚಿಕೊಂಡಿದ್ದರು. ಈ ಬಗ್ಗೆ ದೂರು ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ ಕೆಆರ್ ಪುರಂ ಠಾಣಾ ಸಂಚಾರ ಪೊಲೀಸರು, ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News