ಕರ್ನಾಟಕಕ್ಕೆ ದೈನಂದಿನ ಸಂಚಾರಕ್ಕಾಗಿ ಇನ್ನು ಮುಂದೆ ರೆಗ್ಯುಲರ್ ಪಾಸ್ ಅಗತ್ಯವಿಲ್ಲ : ಜಿಲ್ಲಾಧಿಕಾರಿ ಸಜಿತ್ ಬಾಬು

Update: 2020-08-26 14:23 GMT

ಕಾಸರಗೋಡು : ಕಾಸರಗೋಡು ಜಿಲ್ಲೆಯಿಂದ ಕರ್ನಾಟಕಕ್ಕೆ ತೆರಳಿ ಮರಳುವ ದಿನನಿತ್ಯದ ಪ್ರಯಾಣಕ್ಕೆ ಇನ್ನು ಮುಂದೆ ರೆಗ್ಯುಲರ್ ಪಾಸ್ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ. 

ಈ ಬಗ್ಗೆ  ಜಾರಿಯಲ್ಲಿರುವ ಆದೇಶವನ್ನು ಹಿಂತೆಗೆದುಕೊಂಡಿರುವುದಾಗಿ ಅವರು ಜಿಲ್ಲಾ ಮಟ್ಟದ ಕೊರೋನ ಕೋರ್ ಸಮಿತಿಯ ವೀಡಿಯೊ ಕಾನ್ಫರೆನ್ಸ್  ನಲ್ಲಿ ತಿಳಿಸಿದ್ದಾರೆ. ಇದೇ ವೇಳೆ ಇನ್ನು ಮುಂದೆ ಆಂಟಿಜೆನ್ ಟೆಸ್ಟ್ ನಡೆಸಿ, ಅಲ್ಲಿ ಲಭಿಸುವ ನೆಗೆಟಿವ್ ಸರ್ಟಿಫಿಕೆಟ್ ಸಹಿತ ಕೋವಿಡ್ 19 ಜಾಗ್ರತಾ ಪೋರ್ಟಲ್ ನಲ್ಲಿ ನೋಂದಣಿ ನಡೆಸಿದರೆ ಸಾಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಇದಕ್ಕಾಗಿ ಜಿಲ್ಲಾ ವೈದ್ಯಾಧಿಕಾರಿ ತಲಪ್ಪಾಡಿ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ಸೌಲಭ್ಯ ಏರ್ಪಡಿಸುವರು. ಪ್ರತಿ ಪ್ರಯಾಣಿರು ತೆರಳುವಾಗ ಮತ್ತು ಮರಳುವಾಗ ಗೂಗಲ್ ಸ್ಪ್ರೆಡ್ ಶೀಟ್ ನಲ್ಲಿ ದಾಖಲಾತಿ ನಡೆಸಲಾಗುವುದು ಎಂದು ತಿಳಿಸಿದರು.

ಪೆರ್ಲ, ಜಾಲ್ಸೂರು, ಮಾಣಿಮೂಲೆ, ಪಾಣತ್ತೂರು ಗಡಿರಸ್ತೆಗಳ ಮೂಲಕ ಕರ್ನಾಟಕಕ್ಕೆ ತೆರಳಲು ಅನುಮತಿ 

ಪ್ರಸ್ತತ ಪ್ರಯಾಣಕ್ಕೆ ಅನುಮತಿ ನೀಡಲಾಗಿರುವ ರಾಷ್ಟ್ರೀಯ ಹೆದ್ದಾರಿ 65 ಅಲ್ಲದೆ (ತಲಪ್ಪಾಡಿ ಚೆಕ್ ಪೋಸ್ಟ್) ಪೆರ್ಲ, ಜಾಲ್ಸೂರು, ಮಾಣಿಮೂಲೆ, ಪಾಣತ್ತೂರು ಎಂಬ ಪ್ರಧಾನ ರಸ್ತೆಗಳ ಮೂಲಕ ದಕ್ಷಿಣ ಕನ್ನಡ ಜಿಲ್ಲೆಗೆ ಹೋಗಲು ಅನುಮತಿ ನೀಡಿರುವುದಾಗಿ ಜಿಲ್ಲಾಧಿಕಾರಿ ಸಭೆಯಲ್ಲಿ ಹೇಳಿದರು. ಈ ರಸ್ತೆಗಳಲ್ಲಿ ಪ್ರಯಾಣಿಸುವ ಮಂದಿ ಕೂಡ ಆಂಟಿಜೆನ್ ಟೆಸ್ಟ್ ನಡೆಸಿ ನೆಗೆಟಿವ್ ಸರ್ಟಿಫಿಕೆಟ್ ಸಹಿತ ಕೋವಿಡ್ 19 ಜಾಗ್ರತಾ ಪೋರ್ಟಲ್ ನಲ್ಲಿ ನೋಂದಣಿ ನಡೆಸಬೇಕು. ಈ ರಸ್ತೆಗಳ ಗಡಿ ಹೊಂದಿರುವ ಗ್ರಾಮ ಪಂಚಾಯತ್ ಗಳು ತಪಾಸಣೆಗೆ ಅಗತ್ಯವಿರುವ ಸೌಲಭ್ಯ ಏರ್ಪಡಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News