ಶಾಸಕ ಹರೀಶ್ ಕುಮಾರ್‌ರ ಅನುದಾನ ಬಿಡುಗಡೆ

Update: 2020-08-27 14:36 GMT

ಮಂಗಳೂರು,ಆ.27: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್ ಅವರ 2018-19 ನೇ ಸಾಲಿನ ಅನುದಾನದಲ್ಲಿ ಇರಾ ಬಹ್ಮಶ್ರೀ ನಾರಾಯಣ ಗುರು ಸೇವಾ ಬಿಲ್ಲವ ಸಂಘ (ರಿ)ದ ಸಮುದಾಯ ಭವನ ನಿರ್ಮಾಣಕ್ಕೆ 5 ಲ.ರೂ., ಬಜಾಲ್ ಗ್ರಾಮದ ಬದ್ರಿಯಾ ಶಾಲೆಗೆ ಹೈಮಾಸ್ಕ್ ದೀಪ ಅಳವಡಿಕೆಗೆ 1 ಲ.ರೂ., ಬಡಕಾರಂದೂರು ಗ್ರಾಮದ ಸುಲ್ಕೇರಿ ಮುಗುರು ಕ್ರಾಸ್ ಬಳಿ ರಿಕ್ಷಾ ಪಾರ್ಕಿಂಗ್‌ಗೆ 3 ಲ.ರೂ., ಕಣಿಯೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶೌಚಾಲಯ ನಿರ್ಮಾಣಕ್ಕೆ 3 ಲ.ರೂ., ಕಾಟಿಪಳ್ಳ ಗಣೇಶ್‌ಪುರ ಕಾಟಿಪಳ್ಳದ ಶ್ರೀ ನಿತ್ಯಾನಂದ ಭಜನಾ ಮಂದಿರ (ರಿ)ದ ಸಮುದಾಯ ಭವನ ನಿರ್ಮಾಣಕ್ಕೆ 3 ಲ.ರೂ., ಬೆಳ್ತಂಗಡಿ ತಾಲೂಕಿನ ಯುವಜನ ಇಲಾಖೆಯ ಕಬಡ್ಡಿ ಮ್ಯಾಟ್‌ಗೆ 3 ಲ.ರೂ.ಅನುದಾನ ಬಿಡುಗಡೆ ಮಾಡಲಾಗಿದೆ.

2019-20ನೇ ಸಾಲಿನ ಅನುದಾನದಲ್ಲಿ ಮುಂಡಾರಿನ ದ.ಕ. ಜಿ.ಪಂ.ಕಿ.ಪ್ರಾ.ಶಾಲೆಯ ಆಟದ ಮೈದಾನ ವಿಸ್ತರಣೆಗೆ 3 ಲ.ರೂ., ನೆರಿಯ ಗ್ರಾಮದ ಜಾರ್ಜ್ ಮುಂಡಾಡಿ ಚೊಂಡೆಲ್ ಅಂಗಡಿ ಬಳಿ ಮೋರಿ ರಚನೆಗೆ 1 ಲ.ರೂ., ಸುಳ್ಯದ ದ.ಕ. ಜಿ.ಪಂ. ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಭವನದ ಮೇಲ್ಛಾವಣಿ ನವೀಕರಣ ಹಾಗೂ ಕಟ್ಟಡ ದುರಸ್ತಿಗೆ 3 ಲ.ರೂ.,ಹೊಸಂಗಡಿ ಗ್ರಾಮದ ಪಡ್ಯೊಡಿ ಕೂಡಮಣಿ ರಸ್ತೆ ಅಭಿವೃದ್ಧಿಗೆ 5 ಲ.ರೂ, ಉಳ್ಳಾಲ್ತಿ ಅಮ್ಮನವರ ಕ್ಷೇತ್ರ ಬೊಳ್ಮ ಕೊಣಾಜೆ ಗ್ರಾಮ ಹತ್ತಿರ ಹೈಮಾಸ್ಕ್ ದೀಪ ಅಳವಡಿಕೆಗೆ ರೂ. 1 ಲಕ್ಷ, ಬೆಳ್ತಂಗಡಿ ತಾಲೂಕಿನ ಹಳೆ ಪೇಟೆ ಉಜಿರೆ ಸರಕಾರಿ ಪ್ರೌಢಶಾಲೆಯ ಸಭಾಂಗಣ ನಿರ್ಮಾಣಕ್ಕೆ 2 ಲ.ರೂ., ನಡಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ದುರಸ್ತಿಗೆ 2 ಲ.ರೂ.,ನೆರಿಯ ಗ್ರಾಮದ ಅಗಂಬಾಡಿ ನೆರಿಯ ಕಾಡುವಿನ ಮೋರಿ ವಿಸ್ತರಣೆಗೆ 1 ಲ.ರೂ., ಚಿಬಿದ್ರೆ ಗ್ರಾಮದ ಕಕ್ಕಿಂಜೆಯ ಕಾರುಣ್ಯ ಎಜುಕೇಶನ್ ಫೌಂಡೇಶನ್ ಆಂಗ್ಲ ಮಾಧ್ಯಮ ಶಾಲೆಯ ದುರಸ್ತಿ ಕಾಮಗಾರಿಗೆ 5 ಲ.ರೂ., ಲಾಯಿಲ ಗ್ರಾಮದ ಚಂದ್ಕೂರು ದೇವಸ್ಥಾನದ ಬಳಿ ರಸ್ತೆ ರಚನೆಗೆ 2 ಲ.ರೂ., ಕೊಣಾಜೆಯ ಬೊಳ್ಮ ಉಳ್ಳಾಲ್ತಿ ಅಮ್ಮನವರ ಕ್ಷೇತ್ರದ ಹತ್ತಿರ ಹೈಮಾಸ್ಕ್ ದೀಪ ಅಳವಡಿಕೆಗೆ 1 ಲ.ರೂ., ಮಲವಂತಿಗೆ ಗ್ರಾಮದ ಕಾಜೂರು ದರ್ಗಾ ಬಳಿ ಹೈಮಾಸ್ಕ್ ದೀಪ ಅಳವಡಿಕೆ ಕಾಮಗಾರಿಗೆ 1.50 ಲ.ರೂ. ಅನುದಾನ ಮಂಜೂರು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News