ಮುಅಲ್ಲಿಂ ರಿಲೀಫ್ ಸೆಲ್ ವತಿಯಿಂದ 230 ಮುಅಲ್ಲಿಮರಿಗೆ ಧನ ಸಹಾಯ

Update: 2020-08-28 06:34 GMT

ಮಂಗಳೂರು : ದ.ಕ. ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್, ಮದ್ರಸ ಮೇನೇಜ್ ಮೆಂಟ್ ಅಸೋಸಿಯೇಷನ್ ಹಾಗೂ ಮುಫತ್ತಿಶೀನ್ ಸಂಯುಕ್ತ ಆಶ್ರಯದಲ್ಲಿ ನಡೆಸಲ್ಪಡುವ ಮುಅಲ್ಲಿಂ ರಿಲೀಫ್ ಸೆಲ್ ವತಿಯಿಂದ ದ.ಕ.ಜಿಲ್ಲೆಯ ಸುಮಾರು 230 ಮುಅಲ್ಲಿಮರಿಗೆ ಧನ ಸಹಾಯ ವಿತರಿಸಲಾಗುತ್ತಿದೆ.

ಲಾಕ್ ಡೌನ್ ನಿಂದಾಗಿ ಹಲವು ಮುಅಲ್ಲಿಮರು ಉದ್ಯೋಗ ಕಳೆದುಕೊಂಡ ಸಂಕಷ್ಟದಲ್ಲಿದ್ದು ರೇಂಜ್ ಸಮಿತಿ ಮೂಲಕ ಮಾಹಿತಿ ಪಡೆದು ಅರ್ಹರಿಗೆ ಸಹಾಯ ಮಾಡಲಾಗುತ್ತಿದೆ. ಪ್ರಥಮ ಹಂತದಲ್ಲಿ 110 ಮುಅಲ್ಲಿಮರಿಗೆ  ಮಂಗಳೂರಿನ ಸಮಸ್ತ ಕಚೇರಿಯಲ್ಲಿ ಧನ ಸಹಾಯ ವಿತರಿಸಲಾಯಿತು.

ದ.ಕ.ಜಿಲ್ಲಾ ಖಾಝಿಗಳಾದ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಮೇನೇಜ್ ಮೆಂಟ್ ಅಧ್ಯಕ್ಷರಾದ ಐ. ಮೊಯಿದಿನಬ್ಬ ಹಾಜಿಯವರಿಗೆ ಹಸ್ತಾಂತರಿಸುವ ಮೂಲಕ   ಚಾಲನೆ ನೀಡಿದರು.

ಉಳ್ಳಾಲ ಸಯ್ಯದ್ ಮದನಿ ಅರಬಿಕ್ ಕಾಲೇಜಿನ ಪ್ರಾಂಶುಪಾಲರಾದ ಉಸ್ಮಾನುಲ್ ಫೈಝಿ ಕಾರ್ಯಕ್ರಮ ಉದ್ಘಾಟಿಸಿದರು. ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷರಾದ ಅಬ್ದುಲ್ಲತೀಫ್ ದಾರಿಮಿ ರೆಂಜಾಡಿ, ಮುಫತ್ತಿಶ್ ಉಮರ್ ದಾರಿಮಿ ಸಾಲ್ಮರ, ಮೇನೇಜ್ ಮೆಂಟ್ ಕಾರ್ಯಾಧ್ಯಕ್ಷರಾದ ಎಸ್. ಅಬ್ದುಲ್ ಖಾದರ್ ಹಾಜಿ ಕಡಬ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಂಇಯ್ಯತುಲ್ ಮುಅಲ್ಲಿಮೀನ್ ಜಿಲ್ಲಾ ಪ್ರ. ಕಾರ್ಯದರ್ಶಿ ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ  ಸ್ವಾಗತಿಸಿ ಮದ್ರಸ  ಮೇನೇಜ್ ಮೆಂಟ್ ಪ್ರ. ಕಾರ್ಯದರ್ಶಿಗಳಾದ ರಫೀಕ್ ಹಾಜಿ ಕೊಡಾಜೆ ವಂದಿಸಿದರು.

ಕಾರ್ಯಕ್ರಮದಲ್ಲಿ ಜಂಇಯ್ಯತುಲ್ ಮುಅಲ್ಲಿಮೀನ್ ಉಪಾಧ್ಯಕ್ಷರಾದ ಇಬ್ರಾಹಿಮ್ ದಾರಿಮಿ ಕಡಬ, ಮದ್ರಸ ಮೇನೇಜ್ ಮೆಂಟ್ ಕೋಶಾಧಿ ಕಾರಿ ಮೆಟ್ರೋ ಶಾಹುಲ್ ಹಮೀದ್ ಹಾಜಿ, ಹನೀಫ್ ಹಾಜಿ ಬಂದರ್, ಯೂಸುಫ್ ಹಾಜಿ ಕೋಳ್ತಮಜಲ್, ಅಬ್ದುಲ್ ಹಕೀಂ ಪರ್ತಿಪ್ಪಾಡಿ, ಸಿದ್ಧೀಕ್ ನೀರಾಜೆ, ಸಮದ್ ಹಾಜಿ  ಸಿ.ಎಚ್.ಇಬ್ರಾಹಿಮ್ ಮೌಲವಿ, ಗಫೂರ್ ಹನೀಫಿ, ಮುಹಮ್ಮದಲಿ ಫೈಝಿ, ಅಶ್ರಫ್ ಅಝ್ಹರಿ ಬೋರುಗುಡ್ಡೆ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News