ಬೆಂಗಳೂರಿನಲ್ಲಿ ಬಾಂಬ್ ಸ್ಫೋಟಿಸುವ ಬಗ್ಗೆ ಟ್ವೀಟ್ ಹಿನ್ನೆಲೆ: ಪೊಲೀಸ್ ಭದ್ರತೆ ಹೆಚ್ಚಳ

Update: 2020-08-28 14:56 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಆ.28: ರಾಜಧಾನಿ ಬೆಂಗಳೂರಿನಲ್ಲಿ ಬಾಂಬ್ ಸ್ಫೋಟಿಸುವ ಬಗ್ಗೆ ಟ್ವೀಟ್ ಸಂದೇಶ ಹಿನ್ನೆಲೆ ಸಾರ್ವಜನಿಕ ಪ್ರದೇಶಗಳಲ್ಲಿ ಪೊಲೀಸ್ ಭದ್ರತೆ ಹೆಚ್ಚಳ ಮಾಡಲಾಗಿದೆ.

ಟ್ವಿಟ್ಟರ್ ಖಾತೆಯಿಂದ ಬೆದರಿಕೆ ಸಂದೇಶಗಳು ಬಂದಿವೆ ಎನ್ನಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಎಚ್ಚೆತ್ತುಕೊಂಡ ರಾಜ್ಯ ಗುಪ್ತಚರ ಇಲಾಖೆ ಯಶವಂತಪುರ, ನಮ್ಮ ಮೆಟ್ರೋ ನಿಲ್ದಾಣ, ವಿಧಾನಸೌಧ ಸೇರಿದಂತೆ ಅಗತ್ಯ ಕಡೆಗಳಿಗೆ ಭೇಟಿ ನೀಡಿ ಭದ್ರತೆ ಕೈಗೊಂಡಿದ್ದಾರೆ.

ನಾನು ಭಾರತದ ಯಾವುದೇ ಮೂಲೆಯಲ್ಲಿ ಬೇಕಾದರೂ, ರೈಲು ಸ್ಫೋಟಿಸಬಹುದು, ಎಚ್ಚರಿಕೆಯಿಂದಿರಿ ಎಂದು ಪೋಸ್ಟ್ ಮಾಡಿದ ಕಿಡಿಗೇಡಿ ಈ ಮೂಲಕ ಪೊಲೀಸರಿಗೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆ ರಾಜ್ಯದ ಎಲ್ಲಾ ಹಿರಿಯ ಅಧಿಕಾರಿಗಳಿಗೆ, ಗುಪ್ತಚರ ಇಲಾಖೆ, ಆಂತರಿಕ ಭದ್ರತಾ ವಿಭಾಗಕ್ಕೆ ರಾಜ್ಯಾದ್ಯಂತ ಅಲರ್ಟ್ ಇರುವಂತೆ ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News