ದ.ಕ.ಜಿಲ್ಲೆ : 334 ಮಂದಿಗೆ ಕೊರೋನ ಪಾಸಿಟಿವ್; 6 ಬಲಿ

Update: 2020-08-30 13:35 GMT

ಮಂಗಳೂರು, ಆ.30: ದ.ಕ.ಜಿಲ್ಲೆಯಲ್ಲಿ ರವಿವಾರ 334 ಮಂದಿಯಲ್ಲಿ ಕೊರೋನ ಸೋಂಕಿನ ಪಾಟಿಸಿವ್ ಪತ್ತೆಯಾಗಿದ್ದು, 6 ಮಂದಿ ಬಲಿಯಾಗಿದ್ದಾರೆ.

ರವಿವಾರ ಪಾಸಿಟಿವ್‌ಗೊಳಗಾದ 334 ಮಂದಿಯಲ್ಲಿ ಮಂಗಳೂರಿನ 191, ಬಂಟ್ವಾಳದ 78, ಪುತ್ತೂರಿನ 20, ಸುಳ್ಯದ 6, ಬೆಳ್ತಂಗಡಿಯ 20 ಮತ್ತು ಇತರ ಜಿಲ್ಲೆಯ 19 ಮಂದಿ ಸೇರಿದ್ದಾರೆ. ಇದರಲ್ಲಿ 169 ಪುರುಷ ಮತ್ತು 165 ಮಂದಿ ಮಹಿಳೆಯರು ಸೇರಿದ್ದಾರೆ. ರವಿವಾರ ವರದಿಯಾದ 334 ಮಂದಿಯ ಸಹಿತ ಈವರೆಗೆ ಜಿಲ್ಲೆಯಲ್ಲಿ ಒಟ್ಟು 12,443 ಮಂದಿಗೆ ಕೊರೋನ ಸೋಂಕು ತಗುಲಿದೆ.

ಮಂಗಳೂರು ಮತ್ತು ಪುತ್ತೂರು ತಾಲೂಕಿನ ತಲಾ 2 ಹಾಗೂ ಹೊರಜಿಲ್ಲೆಯ 2 ಮಂದಿಯ ಸಹಿತ ಜಿಲ್ಲೆಯಲ್ಲಿ ರವಿವಾರ 6 ಮಂದಿ ಕೊರೋನಕ್ಕೆ ಬಲಿಯಾಗಿದ್ದು, ಇದರೊಂದಿಗೆ ಈವರೆಗೆ ಬಲಿಯಾದವರ ಸಂಖ್ಯೆ 356ಕ್ಕೇರಿದೆ.

ಈವರೆಗೆ ದ.ಕ.ಜಿಲ್ಲೆಯ 95,213 ಮಂದಿಯ ಗಂಟಲಿನ ದ್ರವದ ಪರೀಕ್ಷೆ ಮಾಡಲಾಗಿದೆ. ಆ ಪೈಕಿ 12,443 ಮಂದಿಯ ವರದಿ ಪಾಸಿಟಿವ್ ಮತ್ತು 82,770 ಮಂದಿಯ ವರದಿ ನೆಗೆಟಿವ್ ಬಂದಿದೆ. ಜಿಲ್ಲೆಯ ವಿವಿಧ ಕೋವಿಡ್ ಸೆಂಟರ್‌ನಿಂದ 11, ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 112 ಮತ್ತು ಬೇರೆ ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 90 ಮಂದಿಯ ಸಹಿತ ರವಿವಾರ 213 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 9422ಕ್ಕೇರಿದೆ. ಜಿಲ್ಲೆಯಲ್ಲಿ 2665 ಸಕ್ರಿಯ ಪ್ರಕರಣಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News