ಬೆಳುವಾಯಿ: ಕಲಂದರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಚಿತ ಟೈಲರಿಂಗ್ ಸೆಂಟರ್ ಉದ್ಘಾಟನೆ

Update: 2020-08-30 14:03 GMT

ಮೂಡುಬಿದಿರೆ, ಆ.30: ಬೆಳುವಾಯಿ ಕಲಂದರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಹಿಳೆಯರಿಗೆ ಸ್ವಉದ್ಯೋಗಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ಆರಂಭಿಸಲಾದ ಉಚಿತ ಟೈಲರಿಂಗ್ ಸೆಂಟರ್ ರವಿವಾರ ಉದ್ಘಾಟನೆಗೊಂಡಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರಿಯನಂಗಡಿಯ ಹಿರಿಯ ಪ್ರಾಥಮಿಕ ಶಾಲೆಯ ಸುಜಯಾ ಮಾತನಾಡಿ ಕಲಂದರ್ ಚಾರಿಟೇಬಲ್ ಟ್ರಸ್ಟ್ ಕಾರ್ಯವೈಖರಿಯನ್ನು ಶ್ಲಾಘಿಸಿದರು.

ಟ್ರಸ್ಟ್‌ನ ಮುಖ್ಯಸ್ಥೆ ನಾಝಿರಾಬಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಉದ್ಘಾಟಿಸಿ ಶುಭ ಹಾರೈಸಿದರು. ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಸದಸ್ಯೆ ಮುಮ್ತಾಝ್ ಬಾನು, ಆಸರೆ ವುಮೆನ್ಸ್ ಫೌಂಡೇಶನ್ ಸದಸ್ಯೆ ಝೊಹರಾ ಅಬ್ಬಾಸ್ ಅತಿಥಿಗಳಾಗಿದ್ದರು. ಟ್ರಸ್ಟ್‌ನ ಹಿರಿಯ ಸದಸ್ಯೆ ಝರೀನಾ ಬಾನು ವೇದಿಕೆಯಲ್ಲಿದ್ದರು. ಟ್ರಸ್ಟ್‌ನ ಸದಸ್ಯರು ಹಾಗೂ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ನಸೀಮಾ ಹಿಮಾಯತ್ ಸ್ವಾಗತಿಸಿದರು. ಫಾತಿಮಾ ಶೌಕತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾದಿಯಾ ಬಾನು ಕಾರ್ಯಕ್ರಮ ನಿರೂಪಿಸಿದರು.

ಉಚಿತ ಟೈಲರಿಂಗ್ ಕಲಿಯಲು ಆಸಕ್ತಿ ಇರುವವರು ಸೆ.1ರೊಳಗೆ ಮೊ.ಸಂ: 9880853409ನ್ನು ಸಂಪರ್ಕಿಸಬಹುದು ಎಂದು ಟ್ರಸ್ಟ್‌ನ ಮುಖ್ಯಸ್ಥೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News