ಪುತ್ತೂರು, ಕಡಬ ತಾಲೂಕಿನಲ್ಲಿ ಮತ್ತೆ 21 ಕೊರೋನ ಪಾಸಿಟಿವ್ ಪ್ರಕರಣ ದೃಢ

Update: 2020-08-31 08:05 GMT

ಪುತ್ತೂರು, ಆ.31: ಕಡಬ ಮತ್ತು ಪುತ್ತೂರು ತಾಲೂಕಿನಲ್ಲಿ ಸೋಮವಾರ ಒಟ್ಟು 21 ಕೊರೋನ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಇದರೊಂದಿಗೆ ಉಭಯ ತಾಲೂಕುಗಳಲ್ಲಿ ಈ ತನಕ ದೃಢಪಟ್ಟ ಒಟ್ಟು ಕೊರೋನ ಪಾಸಿಟಿವ್ ಪ್ರಕರಣಗಳ ಸಂಖ್ಯೆ 693ಕ್ಕೆ ಏರಿಕೆಯಾಗಿದೆ.

ಪುತ್ತೂರು ತಾಲೂಕಿನ ಕಬಕ ನಿವಾಸಿ 49 ವರ್ಷದ ಪುರುಷ, ಕೆಯ್ಯೂರು ನಿವಾಸಿಗಳಾದ 40 ವರ್ಷದ ಪುರುಷ, 34 ವರ್ಷದ ಮಹಿಳೆ, 52 ವರ್ಷದ ಮಹಿಳೆ, 16 ವರ್ಷದ ಬಾಲಕಿ, 25 ವರ್ಷದ ಮಹಿಳೆ, 50 ವರ್ಷದ ಮಹಿಳೆ ಮತ್ತು 14 ವರ್ಷದ ಬಾಲಕ, ನೆಟ್ಟಣಿಗೆ ಮುಡ್ನೂರು ನಿವಾಸಿ 36 ವರ್ಷದ ಪುರುಷ, ಕಾವು ವಾಡ್ನೂರು ನಿವಾಸಿಗಳಾದ 75 ವರ್ಷದ ವೃದ್ಧೆ, 38 ವರ್ಷದ ಮಹಿಳೆ ಮತ್ತು 12 ವರ್ಷದ ಬಾಲಕಿ, ನರಿಮೊಗರು ನಿವಾಸಿ 59 ವರ್ಷದ ಮಹಿಳೆಯೊಬ್ಬರಲ್ಲಿ ಕೊರೋನ ದೃಢಪಟ್ಟಿದೆ.

ಪುತ್ತೂರು ನಗರಸಭಾ ವ್ಯಾಪ್ತಿಯ ಮುಕ್ರಂಪಾಡಿ ನಿವಾಸಿ 54 ವರ್ಷದ ಪುರುಷ, ದರ್ಬೆ ನಿವಾಸಿಗಳಾದ 45 ವರ್ಷದ ಮಹಿಳೆ ಮತ್ತು 34 ವರ್ಷದ ಪುರುಷ, ಸಾಮೆತ್ತಡ್ಕ ನಿವಾಸಿಗಳಾದ 75 ವರ್ಷದ ಮಹಿಳೆ, 19 ವರ್ಷದ ಯುವಕ ಮತ್ತು 51 ವರ್ಷದ ಮಹಿಳೆ, ಬಪ್ಪಳಿಗೆ ನಿವಾಸಿ 60 ವರ್ಷದ ಪುರುಷರಲ್ಲಿ ಕೊರೋನ ಸೋಂಕು ಪತ್ತೆಯಾಗಿದೆ.

ಕಡಬ ತಾಲೂಕಿನ ನೆಲ್ಯಾಡಿ ನಿವಾಸಿ 49 ವರ್ಷದ ಮಹಿಳೆಯಲ್ಲಿ ಕೊರೋನ ದೃಢಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News