ದ.ಕ. ಜಿಲ್ಲೆ: 270 ಮಂದಿಗೆ ಕೊರೋನ ಪಾಸಿಟಿವ್; 12 ಬಲಿ

Update: 2020-08-31 15:14 GMT

ಮಂಗಳೂರು, ಆ.31: ದ.ಕ.ಜಿಲ್ಲೆಯಲ್ಲಿ ಸೋಮವಾರ 270 ಮಂದಿಯಲ್ಲಿ ಕೊರೋನ ಸೋಂಕಿನ ಪಾಟಿಸಿವ್ ಪತ್ತೆಯಾಗಿದ್ದು, 12 ಮಂದಿ ಬಲಿಯಾಗಿದ್ದಾರೆ.

ಸೋಮವಾರ ಪಾಸಿಟಿವ್‌ಗೊಳಗಾದ 270 ಮಂದಿಯಲ್ಲಿ ಮಂಗಳೂರಿನ 117, ಬಂಟ್ವಾಳದ 90, ಪುತ್ತೂರಿನ 24, ಸುಳ್ಯದ 14, ಬೆಳ್ತಂಗಡಿಯ 14 ಮತ್ತು ಇತರ ಜಿಲ್ಲೆಯ 11 ಮಂದಿ ಸೇರಿದ್ದಾರೆ. ಇದರಲ್ಲಿ 113 ಪುರುಷ ಮತ್ತು 157 ಮಂದಿ ಮಹಿಳೆಯರು ಸೇರಿದ್ದಾರೆ. ಸೋಮವಾರ ವರದಿಯಾದ 270 ಮಂದಿಯ ಸಹಿತ ಈವರೆಗೆ ಜಿಲ್ಲೆಯಲ್ಲಿ ಒಟ್ಟು 12,713 ಮಂದಿಗೆ ಕೊರೋನ ಸೋಂಕು ತಗುಲಿದೆ.

ಮಂಗಳೂರು ತಾಲೂಕಿನ 6, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ ತಾಲೂಕಿನ ತಲಾ ಒಂದೊಂದು ಹಾಗೂ ಹೊರಜಿಲ್ಲೆಯ 3 ಮಂದಿಯ ಸಹಿತ ಜಿಲ್ಲೆಯಲ್ಲಿ ಸೋಮವಾರ 12 ಮಂದಿ ಕೊರೋನಕ್ಕೆ ಬಲಿಯಾಗಿದ್ದು, ಇದರೊಂದಿಗೆ ಈವರೆಗೆ ಬಲಿಯಾದವರ ಸಂಖ್ಯೆ 368ಕ್ಕೇರಿದೆ.

ಈವರೆಗೆ ದ.ಕ.ಜಿಲ್ಲೆಯ 95,868 ಮಂದಿಯ ಗಂಟಲಿನ ದ್ರವದ ಪರೀಕ್ಷೆ ಮಾಡಲಾಗಿದೆ. ಆ ಪೈಕಿ 12,713 ಮಂದಿಯ ವರದಿ ಪಾಸಿಟಿವ್ ಮತ್ತು 83,155 ಮಂದಿಯ ವರದಿ ನೆಗೆಟಿವ್ ಬಂದಿದೆ. ಜಿಲ್ಲೆಯ ವಿವಿಧ ಕೋವಿಡ್ ಸೆಂಟರ್‌ನಿಂದ 2, ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 294 ಮತ್ತು ಬೇರೆ ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 71 ಮಂದಿಯ ಸಹಿತ ಸೋಮವಾರ 367 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 9789ಕ್ಕೇರಿದೆ. ಜಿಲ್ಲೆಯಲ್ಲಿ 2556 ಸಕ್ರಿಯ ಪ್ರಕರಣಗಳಿವೆ ಎಂದು ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News