ಬಿಕರ್ನಕಟ್ಟೆ ಬಾಲಯೇಸು ಕ್ಷೇತ್ರದಲ್ಲಿ ಬಲಿಪೂಜೆ ಆರಂಭ

Update: 2020-09-03 08:42 GMT

ಮಂಗಳೂರು, ಸೆ.3: ಬಿಕರ್ನಕಟ್ಟೆಯ ಬಾಲಯೇಸುವಿನ ಪುಣ್ಯಕ್ಷೇತ್ರವು ಐದು ತಿಂಗಳ ನಂತರ ಪ್ರಾರ್ಥನೆಗಾಗಿ ತೆರೆಯಲ್ಲಟ್ಟಿದೆ.

ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಐದು ತಿಂಗಳಿನಿಂದ ಸ್ಥಗಿತಗೊಂಡಿದ್ದ ಕ್ಷೇತ್ರದ ಚಟುವಟಿಕೆಗಳು ಸರಕಾರದ ನಿಯಮ ಮತ್ತು ಕಾಯ್ದೆಯನ್ನು ಪಾಲಿಸಿಕೊಂಡು ನವೇನ ಪೂಜೆ ಆರಂಭಗೊಂಡಿತು. ಇಂದಿನಿಂದ ಪ್ರತಿ ಗುರುವಾರ ಬೆಳಗ್ಗೆ 6 ಗಂಟೆ, 7:30, 10:30 ಹಾಗೂ ಸಂಜೆ 6 ಗಂಟೆಗೆ ದಿವ್ಯ ಬಲಿಪೂಜೆ ನಡೆಯಲಿದೆ. ಪುಣ್ಯಕ್ಷೇತ್ರದಲ್ಲಿ ಪ್ರತಿ ದಿನ ಬಲಿಪೂಜೆ ನಂತರ ಎಲ್ಲ ಸ್ಥಳವನ್ನು ಸ್ಯಾನಿಟೈಸ್ ಮಾಡಲಾಗುವುದು.

ಇಂದಿನ ಪೂಜೆಯಲ್ಲಿ ಕೊರೋನ ಹಿನ್ನೆಲೆಯಲ್ಲಿ ಸೇವೆ ನೀಡುತ್ತಿರುವ ವೈದ್ಯರು, ದಾದಿಯರು, ಪೊಲೀಸ್ ಸಿಬ್ಬಂದಿ ಹಾಗೂ ಕೋವಿಡ್ ಯೋಧರಿಗಾಗಿ ವಿಶೇಷ ಪ್ರಾರ್ಥನೆ ಮಾಡಲಾಯಿತು ಎಂದು ಕ್ಷೇತ್ರದ ಅ.ವಂ. ಚಾರ್ಲ್ಸ್ ಸೆರಾವೊ ಹಾಗೂ ಪುಣ್ಯಕ್ಷೇತ್ರದ ನಿರ್ದೇಶಕ ಅ.ವಂ. ರೋವೆಲ್ ಡಿಸೋಜ ಪ್ರಕಟನೆಯಲ್ಲಿ ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News