ಉಡುಪಿ ಜಿಲ್ಲೆಯ ಕೆಲವೆಡೆ ಜಾನುವಾರುಗಳಲ್ಲಿ ಲುಂಪಿ ಚರ್ಮರೋಗ

Update: 2020-09-03 15:42 GMT

ಉಡುಪಿ, ಸೆ.3: ಪಶುಪಾಲನಾ ಇಲಾಖೆಯ ಮಾಹಿತಿಯಂತೆ ಲುಂಪಿ ಚರ್ಮ ರೋಗ ಎಂಬ ರೋಗವು ಇತ್ತೀಚಿನ ದಿನಗಳಲ್ಲಿ ಜಾನುವಾರುಗಳನ್ನು ಒಳಗೊಂಡು ಎಮ್ಮೆ ಮತ್ತು ಇತರೆ ಪ್ರಾಣಿಗಳಲ್ಲಿ ಕುಂದಾಪುರ ಮತ್ತು ಬ್ರಹ್ಮಾವರ ತಾಲೂಕುಗಳಲ್ಲಿ ಕಂಡುಬಂದಿದೆ. ಇದು ಸೊಳ್ಳೆ, ನೊಣ ಮತ್ತು ಉಣ್ಣೆ ಕಡಿತಗಳಿಂದ ಹರಡುತ್ತದೆ. ದನಗಳ ಚರ್ಮದ ಒಳಭಾಗದಲ್ಲಿ ವರ್ತುಲಾಕಾರದ ಗುಳ್ಳೆ, ಕನಿಷ್ಠ ಪ್ರಮಾಣದ ಜ್ವರ, ಹಾಲು ಇಳುವರಿ ಕಡಿಮೆ, ಆಹಾರ ಸೇವನೆಯಲ್ಲಿ ಕುಂಠಿತ ವಾಗುವುದು ಇತ್ಯಾದಿ ಈ ರೋಗದ ಲಕ್ಷಣಗಳಾಗಿ ಕಾಣಿಸಿಕೊಳ್ಳುತ್ತವೆ.

ಇಲಾಖಾ ಪಶು ವೈದ್ಯಾಧಿಕಾರಿಗಳು ಅಗತ್ಯವಿದ್ದಲ್ಲಿ ರೋಗ ಲಕ್ಷಣವಿರುವ ಜಾನುವಾರು ಮಾಲಕರ ಮನೆಗೆ ಭೇಟಿ ನೀಡಿ ಸೂಕ್ತ ಚಿಕಿತ್ಸೆ ನೀಡಲು ಸೂಚಿಸಲಾಗಿದೆ. ರೋಗ ನಿಯಂತ್ರಣಕ್ಕಾಗಿ ಹಟ್ಟಿಯ ಶುಚಿತ್ವ ಕಾಪಾಡುವುದು ಅತಿ ಅವಶ್ಯಕವಾಗಿದೆ.

ರೋಗ ಹತೋಟಿ: ಕಾಯಿಲೆ ಇರುವ ಜಾನುವಾರುಗಳನ್ನು ಬೇರೆಯೇ ಕಟ್ಟುವುದು. ಹೊರ ಪರೋಪ ಜೀವಿಗಳನ್ನು (ಉಣ್ಣೆ, ಸೊಳ್ಳೆ, ನೊಣ) ನಿಯಂತ್ರಿಸುವುದು. ರೋಗ ಪೀಡಿತ ಪ್ರಾಣಿಗಳ ಸಾಗಾಟ ನಿರ್ಬಂಧಿಸಬೇಕು. ಅಗತ್ಯವಿದ್ದಲ್ಲಿ ರೋಗ ಪತ್ತೆಗಾಗಿ ಮಾದರಿಗಳನ್ನು ಇಲಾಖಾ ಪಶು ವೈದ್ಯಾಧಿಕಾರಿ ಗಳ ಮೂಲಕ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಗೆ ಕಳುಹಿಸಬೇಕು. ಹಟ್ಟಿಗೆ ಕ್ರಿಮಿನಾಶಕ ಸಿಂಪಡಿಸಬೇಕು.

ಕಾಯಿಲೆ ಇರುವ ಜಾನುವಾರುಗಳನ್ನು ಬೇರೆಯೇ ಕಟ್ಟುವುದು. ಹೊರ ಪರೋಪ ಜೀವಿಗಳನ್ನು (ಉಣ್ಣೆ, ಸೊಳ್ಳೆ, ನೊಣ) ನಿಯಂತ್ರಿಸುವುದು. ರೋಗ ಪೀಡಿತ ಪ್ರಾಣಿಗಳ ಸಾಗಾಟ ನಿರ್ಬಂಧಿಸಬೇಕು. ಅಗತ್ಯವಿದ್ದಲ್ಲಿ ರೋಗ ಪತ್ತೆಗಾಗಿ ಮಾದರಿಗಳನ್ನು ಇಲಾಖಾ ಪಶು ವೈದ್ಯಾಧಿಕಾರಿ ಗಳ ಮೂಲಕ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಗೆ ಕಳುಹಿಸಬೇಕು. ಹಟ್ಟಿಗೆ ಕ್ರಿಮಿನಾಶಕ ಸಿಂಪಡಿಸಬೇಕು. ಕೃತಕ ಗರ್ಭಧಾರಣೆಗೆ ರೋಗ ಪೀಡಿತ ಹೋರಿಗಳ ವೀರ್ಯ ಉಪಯೋಗಿ ಸಬಾರದು.

ರೈತರಿಗೆ ಈ ಕಾಯಿಲೆ ಬಗ್ಗೆ ಅರಿವು ಮೂಡಿಸುವ ಬಗ್ಗೆ ಎಲ್ಲಾ ಗ್ರಾಪಂಗಳ ವ್ಯಾಪ್ತಿಯಲ್ಲಿ ಗ್ರಾಮ ಸಭೆಗಳಲ್ಲಿ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳ ವ್ಯಾಪ್ತಿಗಳಲ್ಲಿ ಮಾಹಿತಿ ನೀಡಲು ಇಲಾಖಾ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಕಸ್ಮಾತ್ ಮರಣ ಹೊಂದಿದಲ್ಲಿ ಕ್ರಿಮಿನಾಶಕ ಸಿಂಪಡಿಸಿ ಹೊಂಡದಲ್ಲಿ ವೈಜ್ಞಾನಿಕ ವಾಗಿ ಹೂಳುವುದು ಅಗತ್ಯವಾಗಿದೆ ಎಂದು ಪಶು ಪಾಲನಾ ಇಲಾಖೆಯ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News