ಉಡುಪಿ: ಹೊಸ ದೋಣಿ ನಿರ್ಮಾಣದ ಕಾಲಾವಕಾಶ ವಿಸ್ತರಣೆಗೆ ದಾಖಲೆ ಸಲ್ಲಿಸಲು ಸೂಚನೆ

Update: 2020-09-06 14:22 GMT

ಉಡುಪಿ, ಸೆ.6: ಹೊಸ ದೋಣಿ ನಿರ್ಮಾಣಕ್ಕೆ ಕಾಲಾವಕಾಶ ವಿಸ್ತರಿಸುವಂತೆ ಕೋರಿ ಅರ್ಜಿ ಸಲ್ಲಿಸಿರುವ ಅರ್ಜಿದಾರರು, ಸಂಪೂರ್ಣ ದಾಖಲಾತಿಗನ್ನು ಸಲ್ಲಿಸುವಂತೆ ಸೂಚಿಸಲಾಗಿದೆ.

ಮತ್ಸ್ಯ ಸಂಪತ್ತು ನಿರಂತರವಾಗಿ ಮೀನುಗಾರರಿಗೆ ಲಭ್ಯ ವಾಗಲು ಹಾಗೂ ಈ ಸಂಪತ್ತಿನ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಯಾಂತ್ರೀಕೃತ ಮೀನುಗಾರಿಕೆ ದೋಣಿಗಳ ಸಂಖ್ಯೆಯನ್ನು ನಿಯಂತ್ರಿಸಬೇಕಾಗಿದೆ. ಈ ಹಿನ್ನಲೆ ಯಲ್ಲಿ 2016ರ ನ.21ರವರೆಗೆ ಅರ್ಜಿ ಸಲ್ಲಿಸಿರುವ ಅರ್ಜಿದಾರರಿಗೆ ಮಾತ್ರ ಹೊಸ ದೋಣಿ ನಿರ್ಮಾಣಕ್ಕೆ ಸಾಧ್ಯತಾ ಪ್ರಮಾಣ ಪತ್ರ ನೀಡುವಂತೆ ಸರಕಾರ ಆದೇಶ ಹೊರಡಿಸಿತ್ತು. ಈ ಆದೇಶದಂತೆ ನೀಡಿದ ಸಾಧ್ಯತಾ ಪ್ರಮಾಣ ಪತ್ರದನ್ವಯ ಹೊಸ ದೋಣಿ ನಿರ್ಮಾಣಕ್ಕೆ 2 ವರ್ಷಗಳ ಗಡುವು ನೀಡಲಾಗಿತ್ತು.

ಆದರೆ 2 ವರ್ಷದೊಳಗೆ ದೋಣಿ ನಿರ್ಮಿಸದೆ ಕಾಲಾವಕಾಶ ವಿಸ್ತರಿಸುವಂತೆ ಕೋರಿ ಬಹಳಷ್ಟು ಅರ್ಜಿಗಳು ಸ್ವೀಕೃತವಾಗಿವೆ. ಕೇಂದ್ರ ಕಛೇರಿಯ ನಿರ್ದೇಶನ ದನ್ವಯ ಈ ನಿಟ್ಟಿನಲ್ಲಿ ಸಮರ್ಪಕ ನಿರ್ಣಯ ಕೈಗೊಳ್ಳಲು ಅನುವಾಗುವಂತೆ ಕಾಲಾವಕಾಶ ವಿಸ್ತರಣೆ ಕೋರಿ ಅರ್ಜಿ ಸಲ್ಲಿಸಿರುವ ಅರ್ಜಿದಾರರು, ಹೆಸರು ಮತ್ತು ವಿಳಾಸ, ಸಾದ್ಯತಾ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ ದಿನಾಂಕ ಮತ್ತು ಪತ್ರ ಪಡೆದ ದಿನಾಂಕ, ನಿರ್ಮಾಣದ ಹಂತದಲ್ಲಿರುವ ದೋಣಿಯ ಛಾಯಾಚಿತ್ರ, ದೋಣಿ ನಿರ್ಮಾಣಕ್ಕಾಗಿ ಬ್ಯಾಂಕ್‌ನಿಂದ ಪಡೆದಿರುವ ಸಾಲದ ವಿವರಗಳು (ದಾಖಲಾತಿಗಳ ಸಹಿತ), ದೋಣಿ ನಿರ್ಮಾಣಕ್ಕೆ ಬೋಟ್ ಬಿಲ್ಡಿಂಗ್ ಯಾರ್ಡ್‌ಗೆ ಪಾವತಿಸಿದ ಹಣದ ಬಗ್ಗೆ ದಾಖಲಾತಿ,. ನಿಗಧಿತ ಅವಧಿಯಲ್ಲಿ ದೋಣಿ ನಿರ್ಮಾಣ ಮಾಡದಿರಲು ಸಕಾರಣ, ದೋಣಿ ನಿರ್ಮಾಣವನ್ನು ಪೂರ್ಣಗೊಳಿಸಲು ಅಗತ್ಯವಿರುವ ಹೆಚ್ಚುವರಿ ಕಾಲವಕಾಶದ ಕುರಿತು ಅರ್ಜಿದಾರರಿಂದ ದೃಢೀಕರಣ, ಅರ್ಜಿದಾರರ ದೋಣಿ ನಿರ್ಮಿಸುತ್ತಿರುವ ಬಗ್ಗೆ ಸಂಬಂಧಿಸಿದ ಬೋಟ್ ಬಿಲ್ಡಿಂಗ್ ಯಾರ್ಡ್‌ನವರಿಂದ ದೃಢೀಕರಣಗಳನ್ನು ಸೆ.15ರ ಸಂಜೆ 5ಗಂಟೆ ಯೊಳಗೆ ಸಂಬಂಧಿಸಿದ ಪ್ರಾಧಿಕೃತ ಅಧಿಕಾರಿಗಳ ಕಛೇರಿಗೆ ಸಲ್ಲಿಸಬೇಕು.

ನಿಗಧಿತ ಅವಧಿಯೊಳಗೆ ಅರ್ಜಿದಾರರಿಂದ ಸಂಪೂರ್ಣವಾದ ದಾಖಲಾತಿ ಗಳು ಸಲ್ಲಿಕೆಯಾಗದಿದ್ದಲ್ಲಿ ಅರ್ಜಿದಾರರಿಗೆ ಕಾಲಾವ ಕಾಶ ವಿಸ್ತರಣೆಯಲ್ಲಿ ಆಸಕ್ತಿ ಇಲ್ಲವೆಂದು ಪರಿಗಣಿಸಲಾಗುವುದು. ಹೆಚ್ಚಿನ ಮಾಹಿತಿಗೆ ಸಂಬಂಧಿಸಿದ ಪ್ರಾಧಿಕೃತ ಅಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಮೀನುಗಾರಿಕೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News