ಬೆಂಗಳೂರು: ವೈದ್ಯಕೀಯ ಸಿಬ್ಬಂದಿಗೆ ಉಚಿತ ಆನ್ ಲೈನ್ ತರಬೇತಿ

Update: 2020-09-06 16:36 GMT

ಬೆಂಗಳೂರು, ಸೆ.6 : ಕೋವಿಡ್-19 ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಟಾಟಾ ಟ್ರಸ್ಟ್ ಮತ್ತು ಟಾಟಾ ಸಮೂಹ. ಕ್ರಿಶ್ಚಿಯನ್ ಮೆಡಿಕಲ್ ಕಾಲೇಜ್ ವೆಲ್ಲೂರು ಮತ್ತು ಕೇರ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸಸ್ ಸಂಸ್ಥೆಗಳು ಉಚಿತವಾಗಿ ಸಿಬ್ಬಂದಿಗೆ ಆನ್‍ಲೈನ್ ತರಬೇತಿ ನೀಡಲಾಗುತ್ತಿದೆ.

ಈ ಎರಡೂ ಸಂಸ್ಥೆಗಳ ಸಹಯೋಗದಲ್ಲಿ 26 ರಾಜ್ಯಗಳಲ್ಲಿ ಕೋವಿಡ್ ನಿರ್ವಹಣೆಯಲ್ಲಿ ಕೆಲಸ ಮಾಡುತ್ತಿರುವ, ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ವೃತ್ತಿಪರರರಿಗೆ ಆರೈಕೆ ಕೌಶಲ್ಯವನ್ನು ಹೆಚ್ಚಿಸಲು ನೆರವು ನೀಡುತ್ತಿದೆ. ಆ ಸಂಬಂಧ ಆನ್‍ಲೈನ್‍ ಮೂಲಕ ತರಬೇತಿಯನ್ನು ನೀಡಲಾಗುತ್ತಿದೆ.

ಕೋವಿಡ್ -19 ಬಿಕ್ಕಟ್ಟಿನ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಲು ಸಂಪನ್ಮೂಲಗಳನ್ನು ನಿಯೋಜಿಸಬೇಕಾಗಿದೆ, ಇದು ಸಮಾಜ ಎದುರಿಸಬೇಕಾದ ಕಠಿಣ ಸವಾಲುಗಳಲ್ಲಿ ಒಂದು. ಟಾಟಾ ಹೆಲ್ತ್ ಪ್ರೊಫೆಷನಲ್ ಕೆಪಾಬಿಲಿಟಿ ಬಿಲ್ಡಿಂಗ್ ಪ್ರೋಗ್ರಾಮ್ (THPCBP) ಎಂಬ 22 ಗಂಟೆಗಳ ಆನ್-ಲೈನ್ ತರಬೇತಿ ಕಾರ್ಯಕ್ರಮವನ್ನು ಗುರುತಿಸಲಾದ ಆಸ್ಪತ್ರೆಗಳು ಆಯ್ಕೆ ಮಾಡಿದ ನಿರ್ದಿಷ್ಟ ಸಿಬ್ಬಂದಿಗೆ  ಉಚಿತವಾಗಿ ತರಬೇತಿ ನೀಡಲಾಗುತ್ತದೆ.

ಮೇ 26 ರಿಂದ ಆರಂಭವಾದ ಈ ಕಾರ್ಯಕ್ರಮವು ದೇಶದ ಭಾರತದಾದ್ಯಂತ 346 ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಹಮ್ಮಿಕೊಳ್ಳಲಾಗಿದ್ದು, 2193 ಕ್ಕೂ ಹೆಚ್ಚು ಆರೋಗ್ಯ ವೃತ್ತಿಪರರಿಗೆ ಅಗತ್ಯವಾದ ತರಬೇತಿಯನ್ನು ನೀಡಲಾಗುತ್ತಿದೆ.
ಲ್ಯಾಪ್ ಟಾಪ್, ಡೆಸ್ಕ್ ಟಾಪ್ ಅಥವಾ ಮೊಬೈಲ್ ಫೋನ್ ಗಳ ಮೂಲಕ ಲೈವ್ ವೆಬಿನಾರ್ ಗಳು ಅಥವಾ ತಯಾರಾದ ಮಾಡ್ಯೂಲ್, ಈ ಎರಡು ವಿಧಾನಗಳ ಮೂಲಕ ಆನ್ ಲೈನ್ ವೈದ್ಯಕೀಯ ತರಬೇತಿ ನೀಡಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News